ಕೊಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಹೆಲಿಕಾಪ್ಟರ್ ಹತ್ತುವಾಗ ಗಾಯಗೊಂಡಿದ್ದಾರೆ.
ಪಶ್ಚಿಮ ಬರ್ಧಮಾನ್‌ನ ದುರ್ಗಾಪುರದಲ್ಲಿ ಹೆಲಿಕಾಪ್ಟರ್‌ನಲ್ಲಿ ಕುಳಿತ ನಂತರ ಆಸನದಿಂದ ಜಾರಿ ಬಿದ್ದ ಅವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಭದ್ರತಾ ಸಿಬ್ಬಂದಿ ಸಹಾಯ ಮಾಡಿದ್ದಾರೆ. ನಂತರ ಅವರು ಮುಂದಿನ ಪ್ರಯಾಣವನ್ನು ಅಸನ್ಸೋಲ್‌ಗೆ ಮುಂದುವರಿಸಿದ್ದಾರೆ.
ಒಂದು ತಿಂಗಳ ಹಿಂದೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಕೋಲ್ಕತ್ತಾದ ಕಾಳಿಘಾಟ್ ನಿವಾಸದಲ್ಲಿ ಬಿದ್ದು ಹಣೆಯ ಮೇಲೆ ಗಾಯವಾಗಿತ್ತು.