ನವದೆಹಲಿ: ವಿಮೆ ವಿಧೇಯಕ ವಿರೋಧಿಸಿದ ಮಹಿಳಾ ಸದಸ್ಯರ ಮೇಲೆ ರಾಜ್ಯಸಭೆಯಲ್ಲಿ ಹಲ್ಲೆ ನಡೆಸಲಾಗಿದೆ ಎಂದು ಸಂಸತ್ ಭವನದ ಬಳಿ ಕಾಂಗ್ರೆಸ್ ನಾಯಕ ಹಾಗೂ ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ವಿಮೆ ಬಿಲ್ ತಂದಾಗ ಚರ್ಚೆ ನಡೆಸಬೇಕೆಂದು ಒತ್ತಾಯ ಮಾಡಿದ್ದೆವು. ಆದರೆ, ಚರ್ಚೆಯಿಲ್ಲದೆ ಇನ್ಶೂರೆನ್ಸ್ ಬಿಲ್ ಪಾಸ್ ಮಾಡಲಾಗಿದೆ. ರಾಜ್ಯಸಭೆಯಲ್ಲಿ ಸದಸ್ಯರುಗಳಿಗಿಂತ ಮಾರ್ಷಲ್ ಗಳೇ ಹೆಚ್ಚಾಗಿದ್ದರು. ಮಹಿಳಾ ಸದಸ್ಯರು ಎಂಬುದನ್ನು ನೋಡದೆ ಹಲ್ಲೆ ನಡೆಸಿದ್ದು, ನನ್ನ ರಾಜಕೀಯ ಜೀವನದಲ್ಲಿ ಇದು ಅತ್ಯಂತ ಕೆಟ್ಟ ದಿನವಾಗಿದೆ. ರಾಜ್ಯಸಭೆಯಲ್ಲಿ ಇಂತಹ ಘಟನೆ ನಡೆದಿರುವುದು ಇದೇ ಮೊದಲು ಎಂದು ಆಡಳಿತರೂಢ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.