ನವದೆಹಲಿ: ಕೆಲವು ಹೊಸ ಪಾರ್ಟನರ್ ಗಳು ನಮ್ಮೊಂದಿಗೆ ಜೊತೆಗೂಡಲಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುತೂಹಲ ಮೂಡಿಸಿದ್ದಾರೆ.
ಲೋಕಸಭೆ ಚುನಾವಣೆ ಫಲಿತಾಂಶದ ಕುರಿತಾಗಿ ಎಐಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಸರ್ಕಾರ ರಚನೆ ಕುರಿತಾಗಿ ಪ್ರತಿಕ್ರಿಯೆ ನೀಡಿ, ಕೆಲವು ಹೊಸ ಪಾರ್ಟನರ್ ಗಳು ಜೊತೆಯಾಗಲಿದ್ದಾರೆ. ನಾವು ಏನೇ ಹೇಳಿದರೂ ಮೋದಿ ಹುಷಾರಾಗಿ ಬಿಡುತ್ತಾರೆ. ಹಾಗಾಗಿ ಈಗ ಏನೂ ಹೇಳುವುದಿಲ್ಲ. ನಾಳೆ ಇಂಡಿಯಾ ಮೈತ್ರಿಕೂಟದ ಸಭೆ ಇದೆ. ಅಲ್ಲೇ ಎಲ್ಲವನ್ನು ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಸಂವಿಧಾನ ಉಳಿಸಲು ಹೋರಾಟ ಮಾಡಬೇಕಿತ್ತು. ಮೋದಿ, ಅಮಿತ್ ಶಾ ಎಲ್ಲವನ್ನು ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದರು. ಇಡೀ ಆಡಳಿತ ವ್ಯವಸ್ಥೆ ವಿರುದ್ಧ ಹೋರಾಟ ಮಾಡಿದ್ದೆವು. ನಾವು ಕೇವಲ ರಾಜಕಾರಣಕ್ಕಾಗಿ ಹೋರಾಟ ಮಾಡಿಲ್ಲ. ಸಂವಿಧಾನ ಉಳಿಸಲು ಹೋರಾಟ ಮಾಡಿದೆವು. ಇಂಡಿಯಾ ಮೈತ್ರಿಕೂಟದ ನಾಯಕರ ಜೊತೆ ನಾಳೆ ಸಭೆ ನಡೆಸಿ ನಾವು ಸರ್ಕಾರ ಮಾಡುತ್ತೇವೆಯೋ ಇಲ್ಲವೋ ನಾಳೆ ಹೇಳುತ್ತೇವೆ ಎಂದು ಹೇಳಿದ್ದಾರೆ.