ಮಲ್ಲಿಕಾ ಶೆರಾವತ್ ಎಂಬ ಬಾಲಿವುಡ್ ನಟಿ ಯಾರಿಗೆ ತಾನೇ ಗೊತ್ತಿಲ್ಲ. ಇಮ್ರಾನ್ ಹಶ್ಮಿ ಜೊತೆ ಮರ್ಡರ್ ಸಿನೆಮಾದಿಂದ ಬೆಳಕಿಗೆ ಬಂದ ಈಕೆ, ಅನೇಕ ಸಿನೆಮಾಗಳಲ್ಲಿ ಬೋಲ್ಡ್ ಆಗಿ, ಅಷ್ಟೇ ನೈಜವಾಗಿ ನಟಿಸಿದ್ದಾರೆ. ನಟನೆ ಮತ್ತು ನೃತ್ಯ ಎರಡರಲ್ಲೂ ಸೈ ಎನ್ನಿಸಿಕೊಂಡ ಈಕೆ, ಅವರ ಸಿನೆಮಾ ವೃತ್ತಿಯ ಆರಂಭದ ದಿನಗಳು ಅಷ್ಟು ಸುಲಭವಾಗಿರಲಿಲ್ಲ.
ಇತ್ತೀಚಿಗೆ ಮಲ್ಲಿಕಾ ತನ್ನ ಪ್ರಾರಂಭದ ದಿನಗಳ ಬಗ್ಗೆ ಹೇಳುತ್ತಾ, ಕಾಸ್ಟಿಂಗ್ ಕೌಚ್ (ಪಾತ್ರಕ್ಕಾಗಿ ಪಲ್ಲಂಗ) ಬಗ್ಗೆ ಹೇಳಿಕೊಂಡಿದ್ದಾಳೆ. ಅಷ್ಟೇ ಅಲ್ಲ, ಅನೇಕ ನಟರು ಇವಳೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದರ ಬಗ್ಗೆಯೂ ಹೇಳಿದ್ದಾಳೆ. ಆದರೆ ತಾನು ನಿರಾಕರಿಸಿರೂ ಇಷ್ಟು ಎತ್ತರಕ್ಕೆ ಬಂದಿದ್ದು, ಅದು ಅದೃಷ್ಟವೇ ಇರಬೇಕು ಎಂದು ಹೇಳಿದ್ದಾಳೆ.
ಸೌಂದರ್ಯ ಮತ್ತು ಆರೋಗ್ಯಕ್ಕೆ ‘ಬೆಣ್ಣೆ ಹಣ್ಣು’
“ನಾನು ಮುಂಬೈಗೆ ಬಂದೆ. ಅದೃಷ್ಟವಂತೆ ಅಂತಲೇ ಹೇಳಬೇಕು. ಕ್ವಾಹಿಶ್ ಮತ್ತು ಮರ್ಡರ್ ಎಂಬ ಸಿನೆಮಾಗಳಲ್ಲಿ ನಟನೆಗೆ ಅವಕಾಶ ಸಿಕ್ಕಿತ್ತು . ಮರ್ಡರ್ ಚಿತ್ರದಲ್ಲಿ ನನ್ನದು ಬೋಲ್ಡ್ ಪಾತ್ರ ಇತ್ತು. ಈ ಚಿತ್ರ ಬಿಡುಗಡೆಯಾದ ಮೇಲೆ ಕೆಲವು ನಟರು ನನ್ನೊಂದಿಗೆ ಅಸಭ್ಯವಾಗಿ ನಡೆದುಕೊಂಡರು. ಅಷ್ಟು ಬೋಲ್ಡ್ ಆಗಿ ನಟಿಸಿದ್ದೇನೆ ಎಂದರೆ ನಿಜ ಜೀವನದಲ್ಲೂ ಹೀಗೆ ಇರುತ್ತೀನಿ ಎಂದು ಅವರು ಭಾವಿಸಿದಂತಿತ್ತು” ಮಲ್ಲಿಕಾ ಹೇಳಿಕೊಂಡಿದ್ದಾಳೆ.
ಆಗೆಲ್ಲ ಅವರಿಗೆ ತಿಳಿಹೇಳಿದ್ದೇನೆ. “ನಾನು ಇಲ್ಲಿಗೆ ಬಂದಿರುವುದು ಹೆಸರು ಮಾಡಲು, ಈ ರೀತಿ ರಾಜಿಯಾಗಲು ಅಲ್ಲ. ಇದಾದ ನಂತರ ಆ ನಟರು ನನ್ನೊಂದಿಗೆ ನಟನೆ ಮಾಡಲೇ ಇಲ್ಲ” ಎಂದು ಹೇಳಿಕೊಂಡಿದ್ದಾಳೆ. ಕೆಲವು ವರ್ಷಗಳ ಹಿಂದೆ ಪಾತ್ರಕ್ಕಾಗಿ ಪಲ್ಲಂಗ ವಿಚಾರ ಬಹಳ ಸುದ್ದಿಯಾಗಿ ಸಂಚಲನ ಮೂಡಿಸಿತ್ತು. ಅನೇಕರ ಬಣ್ಣ ಬಯಲಾಗಿತ್ತು.