
ಕುಚಿಂಗ್: ಪ್ರಪಂಚಾದಾದ್ಯಂತ ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಲಸಿಕಾ ಅಭಿಯಾನ ನಡೆಯುತ್ತಿದೆ. ಕೆಲವರು ಭಯದಿಂದ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಇಲ್ಲೊಬ್ಬಾತ ವಿಭಿನ್ನವಾಗಿ ಲಸಿಕಾ ಕೇಂದ್ರಕ್ಕೆ ಆಗಮಿಸಿ ಲಸಿಕೆ ಪಡೆಯುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾನೆ.
ವ್ಯಕ್ತಿಯೊಬ್ಬ ಡೈನೋಸಾರ್ ರೀತಿಯಲ್ಲಿ ವೇಷ ತೊಟ್ಟು ಲಸಿಕಾ ಕೇಂದ್ರಕ್ಕೆ ಆಗಮಿಸಿದಂತಹ ಘಟನೆ ಮಲೇಶಿಯಾದಲ್ಲಿ ಕಂಡುಬಂತು. ಈತನ ಹೆಸರು ಕೆನ್ನಿಸಿಯಾ ಎಂದು ಗುರುತಿಸಲಾಗಿದೆ. ಈತ ಲಸಿಕಾ ಕೇಂದ್ರಕ್ಕೆ ಆಗಮಿಸಿದ ದೃಶ್ಯವನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದೆ. ಡೈನೋಸಾರ್ ವೇಷದಲ್ಲಿ ಬಂದಂತಹ ವ್ಯಕ್ತಿ ಹಂತ-ಹಂತವಾಗಿ ಇರುವಂತಹ ನಿಯಮಗಳನ್ನು ಪಾಲಿಸುವ ಮುಖಾಂತರ ಪ್ರಥಮ ಡೋಸ್ ನ ಲಸಿಕೆ ಪಡೆದುಕೊಂಡಿದ್ದಾನೆ.
ವಿದ್ಯಾರ್ಥಿಗಳ ಪ್ರಸಕ್ತ ಪರಿಸ್ಥಿತಿ ಬಿಂಬಿಸುತ್ತೆ ಈ ಫೋಟೋ
ಇನ್ನು ಲಸಿಕಾ ಕೇಂದ್ರದಲ್ಲಿ ಹಲವರು ಮಂದಿ ಈತನೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಜನರಿಗೆ ಮನೋಲ್ಲಾಸ ತರಿಸಿದ ಬಗ್ಗೆ ನೆಟ್ಟಿಗರು ಹರ್ಷ ವ್ಯಕ್ತಪಡಿಸಿದ್ದಾರೆ.
