ಪ್ಯಾರಿಸ್ ಮೂಲದ ಪ್ಯಾರಿಸ್ ಸೇಮಟ್-ಜರ್ಮೈನ್ ಕ್ಲಬ್ ಕೂಡಿಕೊಂಡಿರುವ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿಯನ್ನು ಸ್ವಾಗತಿಸಲು ಜನರು ಬೀದಿ ಬೀದಿಗಳಲ್ಲಿ ನೆರೆದಿದ್ದಾರೆ.
ಇದರ ನಡುವೆ ಮೆಸ್ಸಿನ ಮಲೆಯಾಳಿ ಅಭಿಮಾನಿಗಳಿಬ್ಬರು ಮೆಸ್ಸಿರನ್ನು ಕೂಗಿದಾಗ, ತಮ್ಮ ಮೆಚ್ಚಿನ ಆಟಗಾರ ತಿರುಗಿ ಅವರಿಗೆ ವಿಶ್ ಮಾಡಿದ್ದು, ಆ ವಿಡಿಯೋ ಈಗ ವೈರಲ್ ಆಗಿದೆ. ಆ ವೇಳೆ ತಮಗಾದ ಅನುಭವವನ್ನು ಮಾತುಗಳಲ್ಲಿ ಹೇಳಿಕೊಳ್ಳಲಾರದಷ್ಟು ಸಂತಸದಲ್ಲಿ ಅಭಿಮಾನಿಗಳು ಮುಳುಗಿದ್ದಾರೆ.
ದೇಸೀ ಧಿರಿಸಿನಲ್ಲಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಪವರ್‌ಸ್ಟಾರ್
ತ್ರಿಶ್ಶೂರಿನ ಅನಾಸ್ ಪಿಎ ಹಾಗೂ ಮಲಪ್ಪುರಂನ ಸಮೀರ್‌ಗೆ ಆರು ಬಾರಿ ಬಲಾನ್ ಡಿ ಓರ್ ಸನ್ಮಾನಿತರಾದ ಮಹಾನ್ ಆಟಗಾರ ಹಾಗೂ ಆತನ ಕುಟುಂಬವನ್ನು ಹತ್ತಿರದಿಂದ ನೋಡಲು ಅವಕಾಶ ಸಿಕ್ಕಿದೆ.
ಬಾರ್ಸಿಲೋನಾದೊಂದಿಗೆ 20 ವರ್ಷಗಳ ತಮ್ಮ ಅನುಬಂಧಕ್ಕೆ ತೆರೆ ಎಳೆದ ಮೆಸ್ಸಿ, ಪ್ಯಾರಿಸ್‌ನ ಪಿಎಸ್‌ಜಿ ಸೇರಿಕೊಂಡಿದ್ದಾರೆ.