ತಿರುವನಂತಪುರಂ: ಕನ್ನಡದ ಒಲವಿನ ಉಡುಗೊರೆ ಕೊಡಲೇನು, ಹಿಂದೂಸ್ತಾನ ಎಂದು ಮರೆಯದ ಸೇರಿದಂತೆ ಕನ್ನಡ ಸೇರಿ ಹಲವು ಭಾಷೆ ಚಿತ್ರಗಳಲ್ಲಿ ಹಾಡಿದ್ದ ಖ್ಯಾತ ಹಿನ್ನೆಲೆ ಗಾಯಕ, ನಟ ಪಿ ಜಯಂದ್ರನ್ (80) ನಿಧನರಾಗಿದ್ದಾರೆ.
ಆರು ದಶಕಗಳಿಗೂ ಅಧಿಕಾರ ಜನರ ಹೃದಯ ಗೆದ್ದಿದ್ದ ಹಿನ್ನೆಲೆ ಗಾಯಕ ಪಿ. ಜಯಚಂದ್ರನ್ ಲೆಜೆಂಡರಿ ಹಿನ್ನೆಲೆ ಗಾಯಕ ಮತ್ತು ನಟ ಪಿ. ಜಯಚಂದ್ರನ್ ಕೇರಳದ ತ್ರಿಶೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಅವರು 16 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ಅವರು 5 ಬಾರಿ ಕೇರಳ ರಾಜ್ಯ ಪ್ರಶಸ್ತಿ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹತ್ತು, ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ತಮಿಳುನಾಡು ಸರ್ಕಾರದ ಕಲೈಮಾರುಣಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಅವರು ಪತ್ನಿ ಲಲಿತಾ, ಮಗಳು ಲಕ್ಷ್ಮಿ, ಮಗ ದೀನನಾಥನ್ ಅವರನ್ನು ಅಗಲಿದ್ದಾರೆ. 1944ರ ಮಾರ್ಚ್ ಮೂರರಂದು ಎರ್ನಾಕುಲಂ ನಲ್ಲಿ ಜನಿಸಿದ ಜಯಚಂದ್ರನ್ ಕೇರಳ ಚಿತ್ರರಂಗದಲ್ಲಿ 6 ದಶಕ ಸೇವೆ ಸಲ್ಲಿಸಿದ್ದಾರೆ.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಜಯಚಂದ್ರನ್ ಅವರನ್ನು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು.