ವೈವಾಹಿಕ ಜೀವನಕ್ಕೆ ಕಾಲಿಟ್ಟ ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲಾ 10-11-2021 10:51AM IST / No Comments / Posted In: Latest News, Live News, International ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫ್ಜಾಯ್ ತಾವು ವಿವಾಹ ಬಂಧನಕ್ಕೆ ಒಳಪಟ್ಟಿರುವ ಬಗ್ಗೆ ಟ್ವಿಟರ್ ಮೂಲಕ ಮಾಹಿತಿ ಬಹಿರಂಗಗೊಳಿಸಿದ್ದಾರೆ. ಮಂಗಳವಾರ ಟ್ವೀಟ್ ಮಾಡಿರುವ ಮಲಾಲಾ, ಈ ದಿನ ನನ್ನ ಜೀವನದ ಅತ್ಯಮೂಲ್ಯ ದಿನವಾಗಿದೆ. ನಾನು ಹಾಗೂ ಅಸರ್ ಜೀವನ ಸಂಗಾತಿಗಳಾಗಿದ್ದೇವೆ. ಕುಟುಂಬಸ್ಥರ ಜೊತೆ ಬರ್ಮಿಂಗ್ಹ್ಯಾಮ್ನ ನಿವಾಸದಲ್ಲಿ ಸಣ್ಣ ನಿಖಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನಿಮ್ಮೆಲ್ಲರ ಹಾರೈಕೆ ನಮಗಿರಲಿ. ಮುಂದಿನ ಜೀವನವನ್ನು ನಡೆಸಲು ನಾವು ಉತ್ಸುಕರಾಗಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಈ ಶೀರ್ಷಿಕೆಯ ಜೊತೆಯಲ್ಲಿ ವಿವಾಹ ಫೋಟೋಗಳನ್ನು ಮಲಾಲಾ ಹಂಚಿಕೊಂಡಿದ್ದಾರೆ. 24 ವರ್ಷದ ಮಲಾಲಾ ಯೂಸುಫ್ಜಾಯ್ ಪಾಕಿಸ್ತಾನದ ಸಾಮಾಜಿಕ ಕಾರ್ಯಕರ್ತೆಯಾಗಿದ್ದು ಬಾಲಕಿಯರ ಶಿಕ್ಷಣಕ್ಕಾಗಿ ಹೋರಾಡಿ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಸ್ವೀಕರಿಸಿ ಇತಿಹಾಸವನ್ನೇ ಸೃಷ್ಟಿಸಿದ್ದರು. 2012ರಲ್ಲಿ ಬಾಲಕಿಯರ ಶಿಕ್ಷಣದ ಪರವಾಗಿ ಧ್ವನಿಯೆತ್ತಿದ ಕಾರಣಕ್ಕೆ ಪಾಕಿಸ್ತಾನದಲ್ಲಿ ತಾಲಿಬಾನಿಗಳು ಮಲಾಲಾ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಇದಾದ ಬಳಿಕ ಮಲಾಲಾ ಮತ್ತಷ್ಟು ಜನಮನ್ನಣೆ ಗಳಿಸಿದರು. ಶಿಕ್ಷಣದಲ್ಲಿ ಲಿಂಗ ಸಮಾನತೆ ವಿಚಾರವಾಗಿ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಮಾತನಾಡುವಾಗ ಅವರಿಗೆ ಕೇವಲ 16 ವರ್ಷ ವಯಸ್ಸಾಗಿತ್ತು. ಈ ಹಿಂದೆ ಮದುವೆ ವಿಚಾರವಾಗಿ ಬ್ರಿಟನ್ ನಿಯತಕಾಲಿಕೆಯೊಂದಕ್ಕೆ ಸಂದರ್ಶನ ನೀಡಿದ್ದ ಮಲಾಲಾ, ಸಂಗಾತಿ ಬೇಕು ಎನಿಸದರೆ ಮದುವೆ ಏಕೆ ಆಗಬೇಕು..? ಇಬ್ಬರೂ ಜೊತೆಯಾಗಿದ್ದರೆ ಸಾಕಲ್ಲವೇ ಎಂದು ಹೇಳಿದ್ದರು. ಇದೀಗ ಇವರೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿರೋದ್ರಿಂದ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಜೊತೆ ಟೀಕೆಗಳ ಸುರಿಮಳೆಯೂ ಕೇಳಿ ಬರ್ತಿದೆ. Today marks a precious day in my life. Asser and I tied the knot to be partners for life. We celebrated a small nikkah ceremony at home in Birmingham with our families. Please send us your prayers. We are excited to walk together for the journey ahead. 📸: @malinfezehai pic.twitter.com/SNRgm3ufWP — Malala Yousafzai (@Malala) November 9, 2021