
ಬಾಲಿವುಡ್ ನಟಿ ಮಲೈಕಾ ಅರೋರಾ ತನ್ನ ಮನಮೋಹಕ ಸೌಂದರ್ಯಕ್ಕೆ ಫೇಮಸ್ ಆಗಿದ್ದ ನಟಿ. ವಯಸ್ಸು 48 ದಾಟಿದರೂ ಫಿಟ್ ಎಂಡ್ ಫೈನ್ ಆಗಿರೋ ಈಕೆಯನ್ನ ನೋಡ್ತಿದ್ರೆ ಎಂಥವರೂ ಕೂಡಾ ಫಿದಾ ಆಗಿ ಹೋಗ್ತಾರೆ.
ಜಿಮ್ ವರ್ಕೌಟ್, ಯೋಗ, ಡಯಟ್ ಫುಡ್ ಇದನ್ನೆಲ್ಲಾ ಮೆಂಟೆನ್ ಮಾಡೋದ್ರಲ್ಲಿ ಮಲೈಕಾ ನಂಬರ್1. ಈಗ ಸೋಶಿಯಲ್ ಮೀಡಿಯಾದಲ್ಲಿ ಮಲೈಕಾಗಳ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಮಾಡುತ್ತಿರೋ ಕಸರತ್ತು ನೋಡ್ತಿದ್ರೆ ಎಂಥವರೂ ಕೂಡಾ ಶಾಕ್ ಆಗಿ ಬಿಡ್ತಾರೆ.
ಇದು ಇತ್ತಿಚೆಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿರೋ ಯೋಗದ ಒಂದು ಆಸನ. ಇದನ್ನ ಮಲೈಕಾ ಲೀಲಾಜಾಲವಾಗಿ ಮಾಡಿ ತೋರಿಸಿದ್ದಾರೆ. ಅದೇ ವಿಡಿಯೋವನ್ನ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.
ಗೋಡೆಯ ಆಸರೆ ಪಡೆದು ಈ ಯೋಗ ಮಾಡುವುದು ಅಷ್ಟು ಸುಲಭ ಅಲ್ಲ. ಅದರಲ್ಲೂ ಎರಡು ಕೈಯಿಂದ ತಲೆ ಕೆಳಗೆ ಮಾಡಿ ನಿಲ್ಲುವುದು ಇದೆ ಅಲ್ಲ ಅದು ಮಾಡುವುದು ತುಂಬಾನೇ ಕಷ್ಟದ ಕೆಲಸ. ಆದರೂ ಮಲೈಕಾ ಇದನ್ನ ತುಂಬಾ ಸುಲಭವಾಗಿ ಮಾಡಿ ತೋರಿಸಿದ್ದಾರೆ. ಅದರಲ್ಲೂ ಅವರು ಮುಗುಳ್ನಗುತ್ತ ಆ ಯೋಗ ಮಾಡುವು ಶೈಲಿ ನೋಡ್ತಿದ್ರೆ ಇನ್ನಷ್ಟು ಆಕರ್ಷಣೀಯ ಅನಿಸುತ್ತೆ. ಈ ವಿಡಿಯೋವನ್ನ ಅಪ್ಲೋಡ್ ಮಾಡಿ ಕ್ಯಾಪ್ಷನ್ನಲ್ಲಿ “ ನೀವು ಕೂಡಾ ಈ ರೀತಿಯಾಗಿ ಯೋಗ ಮಾಡಿ, ಆ ವಿಡಿಯೋವನ್ನ ನನ್ನ ಜೊತೆ ಹಂಚಿಕೊಳ್ಳಿ“ ಅಂತ ಬರೆದುಕೊಂಡಿದ್ದಾರೆ.
ಜನರು ಕೂಡಾ ಮಲೈಕಾ ಮಾಡಿರೋ ವಿಡಿಯೋ ನೋಡಿ, ತಾವು ಕೂಡಾ ಒಂದು ಪ್ರಯತ್ನ ಮಾಡಿಯೇ ಬಿಡೋಣ ಅಂತ ಟ್ರೈ ಮಾಡ್ತಿದ್ದಾರೆ. ವೈರಲ್ ಆಗಿರೋ ಈ ವಿಡಿಯೋವನ್ನ 1.6 ಲಕ್ಷಜನ ವೀಕ್ಷಿಸಿದ್ದಾರೆ.