ಒರಟ ಶ್ರೀ ನಿರ್ದೇಶನ ಸುನಾಮಿ ಕಿಟ್ಟಿ ಅಭಿನಯದ ಬಹು ನಿರೀಕ್ಷಿತ ‘ಕೋರ’ ಚಿತ್ರ ಇನ್ನೇನು ಬಿಡುಗಡೆಗೆ ಸಿದ್ಧವಾಗಿದ್ದು, ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಚಿತ್ರತಂಡ ಇದರ ಮೇಕಿಂಗ್ ವಿಡಿಯೋವನ್ನು ನಿನ್ನೆ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಿದ್ದು, ಕಲಾವಿದರು ಪಟ್ಟಿರುವ ಶ್ರಮವನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.
ಈ ಚಿತ್ರವನ್ನು ರತ್ನಮ್ಮ ಮೂವೀಸ್ ಬ್ಯಾನರ್ ನಲ್ಲಿ ಪಿ ಮೂರ್ತಿ ನಿರ್ಮಾಣ ಮಾಡಿದ್ದು, ಸುನಾಮಿ ಕಿಟ್ಟಿ ಸೇರಿದಂತೆ ಚರಿಷ್ಮಾ, ಪಿ ಮೂರ್ತಿ, ಎಂ ಕೆ ಮಾತಾ ಬಣ್ಣ ಹಚ್ಚಿದ್ದಾರೆ. ಕೆ ಗಿರೀಶ್ ಕುಮಾರ್ ಸಂಕಲನ, ಲೋಕಿ ವೇಷಭೂಷಣ, ಸೆಲ್ವಂ ಮಾತಪ್ಪನ್ ಛಾಯಾಗ್ರಹಣ, ಹಾಗೂ ಕೋರ ಚಿನ್ನಯ್ಯ ಅವರ ಸಾಹಸ ನಿರ್ದೇಶನವಿದೆ.