![](https://kannadadunia.com/wp-content/uploads/2024/02/7891abfd-44d1-4e82-a1c3-3d3b009ac0e2-1024x576.jpg)
ಫೆಬ್ರವರಿ 22ರಂದು ಮೇಕಿಂಗ್ ವಿಡಿಯೋ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಇಂದು ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ. ದುನಿಯಾ ವಿಜಯ್ ಈ ಚಿತ್ರಕ್ಕಾಗಿ ಸಾಕಷ್ಟು ಪರಿಶ್ರಮಪಟ್ಟಿದ್ದು, ಸಾಹಸ ದೃಶ್ಯಗಳನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.
ಕೃಷ್ಣ ಕ್ರಿಯೇಶನ್ಸ್ ಹಾಗೂ ಜಗದೀಶ್ ಫಿಲಂಸ್ ಬ್ಯಾನರ್ ನಲ್ಲಿ ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ದುನಿಯಾ ವಿಜಯ್ ಗೆ ಜೋಡಿಯಾಗಿ ಅಶ್ವಿನಿ ಅಭಿನಯಿಸಿದ್ದಾರೆ. ಬ್ಲ್ಯಾಕ್ ಡ್ರ್ಯಾಗನ್ ಮಂಜು, ಕಲ್ಯಾಣಿ ಹಾಗೂ ಪ್ರಿಯಾ ಉಳಿದ ಪಾತ್ರ ವರ್ಗದಲ್ಲಿದ್ದಾರೆ. ಶಿವ್ ಸೇನಾ ಸಂಕಲನವಿದ್ದು, ಚರಣ್ ರಾಜ್ ಸಂಗೀತ ಸಂಯೋಜನೆ ನೀಡಿದ್ದಾರೆ.