ಬೆಂಗಳೂರು : ನಮ್ಮ ಮೆಟ್ರೋ’ ದಲ್ಲಿ ರೀಲ್ಸ್ ಮಾಡಿ ಹುಚ್ಚಾಟ ಮೆರೆದ ಯೂಟ್ಯೂಬರ್ಗೆ ಅಧಿಕಾರಿಗಳು 500 ರೂ.ದಂಡ ವಿಧಿಸಿದ್ದಾರೆ.
ಯೂಟ್ಯೂಬರ್ ಸಂತೋಷ್ ಕುಮಾರ್ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು 500 ರೂ ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ.
ಏನಿದು ಘಟನೆ
ಯೂಟ್ಯೂಬರ್ ಸಂತೋಷ್ ಕುಮಾರ್ ಡಿಸೆಂಬರ್ 24 ರಂದು ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ರೀಲ್ಸ್ ಮಾಡಿ ಹುಚ್ಚಾಟ ಮೆರೆದಿದ್ದರು. ಅಲ್ಲದೇ ರೀಲ್ಸ್ ಮಾಡಿ ಇತರ ಪ್ರಯಾಣಿಕರಿಗೂ ತೊಂದರೆ ಕೊಟ್ಟಿದ್ದರು. ನಂತರ ಯಶ್ ಗೌಡ ಎಂಬ ಅಕೌಂಟ್ ರೀಲ್ಸ್ ವಿಡಿಯೋ ಅಪ್ ಲೋಡ್ ಮಾಡಲಾಗಿತ್ತು, ಇದನ್ನು ಆಧರಿಸಿ ಸಂತೋಷ್ ಕುಮಾರ್ ನನ್ನು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಿ 500 ರೂ ದಂಡ ವಿಧಿಸಿ ಎಚ್ಚರಿಕೆ ನೀಡಿ ಕಳುಹಿಸಿಕೊಡಲಾಗಿದೆ.