ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್), ಫಾರ್ಚೂನ್ 500 ಮತ್ತು ಪೂರ್ಣ ಇಂಟಿಗ್ರೇಟೆಡ್ ಮಹಾರತ್ನ ಎನರ್ಜಿ ಕಂಪನಿ ಮತ್ತು ಭಾರತದ ಎಲೆಕ್ಟ್ರಿಕ್ ವಾಹನ ಕ್ರಾಂತಿಯ ಪ್ರವರ್ತಕ ಎಂದು ಹೆಸರುವಾಸಿಯಾಗಿರುವ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ (ಟಿಪಿಇಎಂ) ಭಾರತದಾದ್ಯಂತ ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವ ಸಲುವಾಗಿ ಸಹಯೋಗ ಸಾಧಿಸುವ ಎಂಓಯುಗೆ ಸಹಿ ಹಾಕಿದೆ.
ಟಾಟಾ ಇವಿ ಮಾಲೀಕರು ಆಗಾಗ್ಗೆ ಭೇಟಿ ನೀಡುವ ಸ್ಥಳಗಳಲ್ಲಿ ಚಾರ್ಜರ್‌ಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಈ ಸಹಯೋಗವು ಬಿಪಿಸಿಎಲ್‌ನ ವ್ಯಾಪಕವಾದ ಇಂಧನ ಕೇಂದ್ರಗಳ ಜಾಲವನ್ನು ಮತ್ತು ಭಾರತೀಯ ರಸ್ತೆಯಲ್ಲಿ ಓಡಾಡುತ್ತಿರುವ 1.15 ಲಕ್ಷಕ್ಕೂ ಹೆಚ್ಚು ಟಾಟಾ ಇವಿಗಳಿಂದ ದೊರೆಯುವ ಟಿಪಿಎಂನ ಒಳನೋಟಗಳನ್ನು ಬಳಸಿಕೊಳ್ಳುವಲ್ಲಿ ನೆರವಾಗಲಿದೆ. ಹೆಚ್ಚುವರಿಯಾಗಿ, ಬಿಪಿಸಿಎಲ್ ಗ್ರಾಹಕರ ಅನುಭವವನ್ನು ಸುಧಾರಿಸಲು ಚಾರ್ಜರ್ ಬಳಕೆಯ ಮಾಹಿತಿ ಮತ್ತು ಒಳನೋಟಗಳನ್ನು ಸಂಗ್ರಹಿಸಲಿದೆ.
ಟಿಪಿಇಎಂ ಮತ್ತು ಬಿಪಿಸಿಎಲ್ ನಡುವಿನ ಈ ಒಪ್ಪಂದವು ಭಾರತದಾದ್ಯಂತ ಇರುವ ಇವಿ ಮಾಲೀಕರ ಒಟ್ಟಾರೆ ಅನುಭವವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಟಾಟಾ ಇವಿ ಬಳಕೆದಾರರಿಗೆ ಪಾವತಿ ಮಾಡುವುದನ್ನು ಸುಲಭಗೊಳಿಸಲು ಮತ್ತು ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಳಸಲು ಹೆಚ್ಚಿನ ಜನರನ್ನು ಉತ್ತೇಜಿಸಲು, ಈ ಎರಡು ಕಂಪನಿಗಳು ಕೋ-ಬ್ರಾಂಡೆಡ್ ಆರ್‌ಎಫ್‌ಐಡಿ ಕಾರ್ಡ್ ಮೂಲಕ ಅನುಕೂಲಕರ ಪಾವತಿ ವ್ಯವಸ್ಥೆಯನ್ನು ಪರಿಚಯಿಸುವ ಸಾಧ್ಯತೆಯನ್ನು ಅನ್ವೇಷಿಸುತ್ತಿವೆ.