
ಬೆಳಗು ಉತ್ತಮವಾಗಿದ್ದರೆ ಇಡೀ ದಿನ ಚೆನ್ನಾಗಿ ಕಳೆಯುತ್ತದೆ. ಹಾಗಾಗಿ ನಿಮ್ಮ ಬೆಳಗಿನ ದಿನಚರಿಯನ್ನು ಆರೋಗ್ಯಕರವಾಗಿಸಲು ಪ್ರಯತ್ನಿಸಿ. ಇಲ್ಲದೇ ಹೋದರೆ ಬೆಳಗಿನ ಉಪಾಹಾರ ಮುಗಿಸಿ ಆಫೀಸ್‌ಗೆ ಹೋದಾಗ ಕೆಲಸ ಮಾಡುವಾಗ ಆಲಸ್ಯ ಅನಿಸುತ್ತದೆ. ಹಾಗಾಗದಂತೆ ತಡೆಯಲು ಬೆಳಗಿನ ಚಟುವಟಿಕೆ ಯಾವ ರೀತಿ ಇರಬೇಕೆಂದು ನೋಡೋಣ.
ಬೆಳಗ್ಗೆ ನಿದ್ದೆಯಿಂದ ಏಳಲು ಸಮಯವನ್ನು ನಿಗದಿಪಡಿಸಿಕೊಳ್ಳಿ. ಪ್ರತಿದಿನ ನೀವು ಒಂದೇ ಸಮಯಕ್ಕೆ ಎದ್ದರೆ ನಿಮ್ಮ ದೇಹದ ಕಾರ್ಯನಿರ್ವಹಣೆ ಅದಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತದೆ. ನಿದ್ದೆಯ ಸಮಯವನ್ನು ಬದಲಾಯಿಸಬೇಡಿ.
ಬೆಳಗ್ಗೆ ಎದ್ದ ತಕ್ಷಣ ನೀರು ಕುಡಿಯುವುದನ್ನು ರೂಢಿಸಿಕೊಳ್ಳಿ. ಇದರಿಂದ ದೇಹವು ಹೈಡ್ರೇಟ್ ಆಗುವುದಲ್ಲದೆ, ಕರುಳಿನ ಚಲನೆಗೆ ತೊಂದರೆಯಾಗುವುದಿಲ್ಲ. ದಿನವಿಡೀ ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಇರುವುದಿಲ್ಲ.
ಬೆಳಗಿನ ತಿಂಡಿಗೆ ಎಣ್ಣೆಯುಕ್ತ ಆಹಾರವನ್ನು ಸೇವಿಸಬೇಡಿ. ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳಲು ಪ್ರಯತ್ನಿಸಿ. ಬೆಳಗಿನ ಉಪಾಹಾರದಲ್ಲಿ ಪ್ರೋಟೀನ್ ಸಮೃದ್ಧವಾಗಿದ್ದರೆ ಉತ್ತಮ, ಏಕೆಂದರೆ ಇದು ಶಕ್ತಿಯ ಸಮೃದ್ಧ ಮೂಲವಾಗಿದ್ದು, ನೀವು ದಿನವಿಡೀ ಆಯಾಸವಿಲ್ಲದೇ ಕೆಲಸ ಮಾಡಲು ಸಾಧ್ಯವಾಗುತ್ತದೆ.
ಬೆಳಿಗ್ಗೆ ಎದ್ದ ತಕ್ಷಣ ಕಚೇರಿಗೆ ಹೋಗಲು ಆತುರಪಡಬೇಡಿ. ನಿದ್ರೆಯಿಂದ ಎದ್ದ ನಂತರ 20-30 ನಿಮಿಷ ವಾಕಿಂಗ್ ಅಥವಾ ಜಾಗಿಂಗ್ ಮಾಡಬೇಕು. ಇದರಿಂದ ದೇಹದಲ್ಲಿ ರಕ್ತ ಸಂಚಾರ ಹೆಚ್ಚಾಗುತ್ತದೆ, ಆರೋಗ್ಯಕ್ಕೆ ಇದು ಒಳ್ಳೆಯದು.
ಕೆಲವರಿಗೆ ಬೆಳಗ್ಗೆ ಎದ್ದ ತಕ್ಷಣ ಚಹಾ ಕುಡಿಯುವ ಅಭ್ಯಾಸವಿರುತ್ತದೆ. ಬೆಡ್ ಟೀ ಎಂದೇ ಇದನ್ನು ಕರೆಯುತ್ತಾರೆ. ಆದರೆ ಖಾಲಿ ಹೊಟ್ಟೆಯಲ್ಲಿ ಚಹಾ ಸೇವನೆ ಮಾಡುವುದರಿಂದ ಹೊಟ್ಟೆಯ ಸಮಸ್ಯೆಗಳಾಗಬಹುದು. ನಿಮಗೆ ಮಲಬದ್ಧತೆಯಿದ್ದರೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯಬೇಡಿ.
ಬೆಳಗ್ಗೆ ಈ ಎಲ್ಲಾ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ದೇಹ ದಿನವಿಡೀ ಶಕ್ತಿಯುತವಾಗಿ, ಉಲ್ಲಾಸದಿಂದಿರುತ್ತದೆ. ನಿಮಗೆ ಆಯಾಸದ ಅನುಭವವಾಗುವುದಿಲ್ಲ. ಕಚೇರಿಯಲ್ಲಿ ಸೋಮಾರಿತನ ದೂರವಾಗುತ್ತದೆ, ಚಯಾಪಚಯ ಕ್ರಿಯೆ ಮತ್ತು ಜೀರ್ಣಕ್ರಿಯೆಯೂ ಚೆನ್ನಾಗಿರುತ್ತದೆ.