ಕೊರೊನಾ ಸಂದರ್ಭದಲ್ಲಿ ಸಣ್ಣ ನೆಗಡಿ, ಕೆಮ್ಮು ಕಾಣಿಸಿಕೊಂಡರೂ ಭಯ ಕಾಡುತ್ತದೆ. ಕೊರೊನಾ ಲಸಿಕೆ ಹಾಕಿಸಿಕೊಂಡವರು ಕೂಡ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಋತು ಬದಲಾದಂತೆ ಜ್ವರ, ನೆಗಡಿ, ಕೆಮ್ಮು ಸಾಮಾನ್ಯ. ಇಂಥ ಸಂದರ್ಭದಲ್ಲಿ ಆಯುರ್ವೇದದ ಸಹಾಯ ಪಡೆಯಬಹುದು. ಕಷಾಯ ಸೇವನೆ ಮಾಡುವ ಮೂಲಕ ಇದರಿಂದ ನೆಮ್ಮದಿ ಪಡೆಯಬಹುದು.
ಆಯುರ್ವೇದ ಕಷಾಯ ತಯಾರಿಸಲು ಕಷಾಯ ತಯಾರಿಸಲು ಒಂದು ಲೋಟ ನೀರು, 8 ರಿಂದ 10 ತುಳಸಿ ಎಲೆಗಳು, 2 ರಿಂದ 3 ಲವಂಗ, 1 ರಿಂದ 2 ಸಣ್ಣ ತುಂಡು ದಾಲ್ಚಿನಿ, ಅರ್ಧ ಟೀ ಚಮಚ ಅರಿಶಿನ ಮತ್ತು 2 ಟೀ ಚಮಚ ಜೇನುತುಪ್ಪ ಬೇಕಾಗುತ್ತದೆ. ತುಳಸಿ ಎಲೆಗಳು, ದಾಲ್ಚಿನಿ, ಲವಂಗ ಮತ್ತು ಅರಿಶಿನವನ್ನು ಚೆನ್ನಾಗಿ ಪುಡಿ ಮಾಡಿ. ಈ ಪೇಸ್ಟ್ ಅನ್ನು ಮೊದಲು ಬಾಣಲೆಯಲ್ಲಿ ಫ್ರೈ ಮಾಡಿ ಪಕ್ಕಕ್ಕೆ ಇರಿಸಿ. ಈ ಬಾಣಲೆಗೆ ನೀರನ್ನು ಹಾಕಿ ಕುದಿಸಿ. ನಂತ್ರ ಪೇಸ್ಟ್ ಅನ್ನು ಅದರಲ್ಲಿ ಹಾಕಿ ಕುದಿಯಲು ಬಿಡಿ. 15 ರಿಂದ 20 ನಿಮಿಷಗಳ ನಂತರ ಗ್ಯಾಸ್ ಆಫ್ ಮಾಡಿ ಮತ್ತು ಈ ನೀರನ್ನು ಫಿಲ್ಟರ್ ಮಾಡಿ.
ಇದಕ್ಕೆ ರುಚಿಗೆ ತಕ್ಕಷ್ಟು ಜೇನುತುಪ್ಪವನ್ನು ಹಾಕಿ ಕುಡಿಯಿರಿ.