ಉಡುಗೊರೆಗಳನ್ನು ಮಾರುಕಟ್ಟೆಯಿಂದ ಖರೀದಿಸಿ ಅದನ್ನು ಪ್ರೀತಿಪಾತ್ರರಿಗೆ ನೀಡುವುದು ಸಾಮಾನ್ಯ. ಆದರೆ ನಾವೇ ಕೈಯ್ಯಾರೆ ಮಾಡಿದ ಉಡುಗೊರೆಗಳ ವಿಶೇಷತೆಯೇ ಬೇರೆ. ಇದರ ಹಿಂದಿನ ಪರಿಶ್ರಮ ಮತ್ತು ಪ್ರೀತಿ ವಿಶೇಷ ಭಾವನೆಗಳನ್ನು ಹುಟ್ಟುಹಾಕುತ್ತದೆ.
ಕೈಯ್ಯಿಂದ ಮಾಡಿದ ಚಿಕ್ಕ ಚಿಕ್ಕ ಉಡುಗೊರೆಗಳೂ ಬಹಳ ವಿಶೇಷವೆನಿಸುತ್ತವೆ. ವ್ಯಾಲೆಂಟೈನ್ ದಿನದಂದು ಸಂಗಾತಿಗೆ ನೀವೇ ತಯಾರಿಸಿ ಕೊಡಬಹುದಾದ ಉಡುಗೊರೆಗಳನ್ನು ನೋಡೋಣ.
ಪ್ರೇಮಿಗಳ ದಿನದ ಸಂದರ್ಭದಲ್ಲಿ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಸಂಗಾತಿಗೆ ಕೈಯಿಂದ ಮಾಡಿದ ಫೋಟೋ ಆಲ್ಬಮ್ ಅಥವಾ ಸ್ಕ್ರಾಪ್‌ಬುಕ್ ಕೊಡಬಹುದು. ವಿಶೇಷ ಕ್ಷಣಗಳ ಫೋಟೋಗಳನ್ನು ಒಟ್ಟಿಗೆ ಸಂಗ್ರಹಿಸಿ ಇದನ್ನು ತಯಾರಿಸಿ.
ಕೈಯಿಂದ ಮಾಡಿದ ಮೇಣದಬತ್ತಿಗಳನ್ನು ಕೂಡ ವ್ಯಾಲಂಟೈನ್ ಡೇಯಂದು ಕೊಡಬಹುದು. ಅರೋಮಾಥೆರಪಿ ಮೇಣದಬತ್ತಿಗಳನ್ನು ಹೇಗೆ ತಯಾರಿಸಬೇಕೆಂದು ತಿಳಿಯಿರಿ ಮತ್ತು ನಿಮ್ಮ ಸಂಗಾತಿಯ ನೆಚ್ಚಿನ ಪರಿಮಳದಲ್ಲಿ ಅವುಗಳನ್ನು ತಯಾರಿಸಿ. ಈ ಉಡುಗೊರೆಯು ಮನೆಯನ್ನು ಆಹ್ಲಾದಕರ ಸುಗಂಧದಿಂದ ತುಂಬಿಸುತ್ತದೆ.
ಮಗ್ ಅಥವಾ ಪ್ಲೇಟ್ ಸೆರಾಮಿಕ್ ಪೇಂಟಿಂಗ್ ವರ್ಕ್‌ಶಾಪ್‌ಗೆ ಭೇಟಿ ನೀಡಿ. ಮನೆಯಲ್ಲೇ ಸೆರಾಮಿಕ್ ಪೇಂಟ್‌ಗಳನ್ನು ಬಳಸಿಕೊಂಡು ಸಂಗಾತಿಗಾಗಿ ಮಗ್ ಅಥವಾ ಪ್ಲೇಟ್ ಅನ್ನು ಅಲಂಕರಿಸಿ ಕೊಡಬಹುದು. ಅದರ ಮೇಲೆ ವಿಶೇಷ ಸಂದೇಶ, ವಿನ್ಯಾಸ ಅಥವಾ ಹೆಸರಿನ ಮೊದಲ ಅಕ್ಷರಗಳನ್ನು ಚಿತ್ರಿಸಬಹುದು.
ಸಂಗಾತಿಯ ನೆಚ್ಚಿನ ಚಾಕೊಲೇಟ್ ಫ್ಲೇವರ್ ಅನ್ನು ತಿಳಿದುಕೊಳ್ಳಿ. ಮನೆಯಲ್ಲಿಯೇ ಚಾಕಲೇಟ್‌ಗಳನ್ನು ತಯಾರಿಸಿ. ಅವುಗಳನ್ನು ವಿಶೇಷ ಆಕಾರಗಳಲ್ಲಿ ಅಚ್ಚು ಮಾಡಿ, ಸುಂದರವಾಗಿ ಪ್ಯಾಂಕಿಂಗ್ ಮಾಡಿ ವ್ಯಾಲಂಟೈನ್ ಡೇಯಂದು ಕೊಡಬಹುದು. ಈ ಉಡುಗೊರೆ ಅವರ ಹೃದಯವನ್ನು ಸ್ಪರ್ಶಿಸುತ್ತದೆ, ಮುಖದಲ್ಲಿ ನಗು ತರುತ್ತದೆ.