ಮಳೆಯ ಹನಿಗೆ ಮುಖಕ್ಕೆ ಹಚ್ಚಿದ ಮೇಕಪ್ ಮಾಸುವುದು ಗ್ಯಾರಂಟಿ. ಮೇಕಪ್ ಪ್ರಿಯರು ಕೆಲವು ಟಿಪ್ಸ್ ಗಳನ್ನು ಗಮನದಲ್ಲಿಟ್ಟುಕೊಂಡಾಗ ನೋಡಲು ಆಕರ್ಷಕವಾಗಿ ಕಾಣಬಹುದು. ಆ ಸಿಂಪಲ್ ಟಿಪ್ಸ್ ಏನು ಅಂತ ತಿಳಿಯೋಣ.
* ಮಳೆಗಾಲದಲ್ಲಿ ಲಿಕ್ವಿಡ್ ಮೇಕಪ್ ಬಳಸಬೇಡಿ. ಯಾಕಂದ್ರೆ, ನೀರಿನಲ್ಲಿ ಬೇಗ ಕರಗುತ್ತದೆ. ಹೊರಗೆ ಓಡಾಡುವವರು ವಾಟರ್‌ಫ್ರೂಫ್ ಅಥವಾ ಆಯಿಲ್ ಬೇಸ್ ಫೌಂಡೇಷನ್ ಬಳಸಿ.
* ಫೌಂಡೇಷನ್ ಹಾಕಿದ ನಂತರ ಯಾವುದೇ ಕಾರಣಕ್ಕೂ ಟಾಲ್ಕಂ ಪೌಡರನ್ನು ಬಳಸಬೇಡಿ. ಬದಲಿಗೆ ಕಾಂಪ್ಯಾಕ್ಟ್ ಪೌಡರನ್ನು ಬಳಸಿ.
* ಲಿಕ್ವಿಡ್ ಬಿಂದಿ ಬದಲು ಸ್ಟಿಕ್ಕರ್ ಬಿಂದಿ ಬಳಸಿ. ಮ್ಯಾಟ್ ಫಿನಿಶಿಂಗ್ ಅಥವಾ ಲಾಂಗ್‌ಸ್ಟೇ ಲಿಪ್‌ಸ್ಟಿಕ್ ಬಳಸಿ. ನೀರಿನೊಂದಿಗೆ ಇದು ಕರಗುವುದಿಲ್ಲ.