ಎಲ್ಲರಿಗೂ ಬೆಳಿಗ್ಗಿನ ತಿಂಡಿಯದ್ದೇ ಸಮಸ್ಯೆ. ಇಡ್ಲಿ, ದೋಸೆ, ಉಪ್ಪಿಟ್ಟು ತಿಂದು ತಿಂದು ಬೇಜಾರಾಗಿರುತ್ತೆ. ಏನಾದರೂ ಹೊಸ ರುಚಿ ಮಾಡೋಣವೆಂದರೆ ಸಮಯ ಬೇಕಾಗುತ್ತೆ. ಇಲ್ಲಿ ಸುಲಭವಾಗಿ ಮಾಡುವ ತಿಂಡಿ ಇದೆ ನೋಡಿ. ರಾತ್ರಿ ಮಿಕ್ಕಿದ ಅನ್ನದಿಂದಲೂ ಕೂಡ ಇದನ್ನು ಮಾಡಿಕೊಳ್ಳಬಹುದು.
1 ಕಪ್ -ಅನ್ನ, 2 ಟೀ ಸ್ಪೂನ್ ನಷ್ಟು ಕಡಲೆಬೀಜ, 6-ಗೋಡಂಬಿ, ಸಾಸಿವೆ-1 ಟೀ ಸ್ಪೂನ್, ಜೀರಿಗೆ-1 ಟೀ ಸ್ಪೂನ್, ಕಡಲೆಬೇಳೆ-1 ಚಮಚ, ಕರಿಬೇವು-8 ಎಸಳು, ಕೊತ್ತಂಬರಿ-ಸ್ವಲ್ಲ, ಈರುಳ್ಳಿ-1 ದೊಡ್ಡದ್ದು ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ, 2-ಹಸಿಮೆಣಸು-2, ಎಣ್ಣೆ-3 ಚಮಚ, ಕ್ಯಾರೆಟ್-3 ಚಮಚ ಚಿಕ್ಕದ್ದಾಗಿ ಕತ್ತರಿಸಿಕೊಂಡಿದ್ದು, ಬೀನ್ಸ್-3 ಚಮಚ ಚಿಕ್ಕದ್ದಾಗಿ ಕತ್ತರಿಸಿಕೊಂಡಿದ್ದು, ಕ್ಯಾಪ್ಸಿಕಂ -3 ಚಮಚ ಚಿಕ್ಕದ್ದಾಗಿ ಕತ್ತರಿಸಿಕೊಂಡಿದ್ದು, ನಿಂಬೆ ಹಣ್ಣಿನ ರಸ-2 ಚಮಚ.
ಮಾಡುವ ವಿಧಾನ: ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ. ಅದು ಬಿಸಿಯಾಗುತ್ತಲೇ ಅದಕ್ಕೆ ಸಾಸಿವೆ, ಜೀರಿಗೆ, ಕಡಲೆಬೇಳೆ, ಕಡಲೆಬೀಜ, ಗೋಡಂಬಿ ಹಾಕಿ 2 ನಿಮಿಷ ಇದನ್ನು ಫ್ರೈ ಮಾಡಿಕೊಳ್ಳಿ. ನಂತರ ಹಸಿಮೆಣಸು, ಈರುಳ್ಳಿ, ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಂ ಕೂಡ ಹಾಕಿ ಚೆನ್ನಾಗಿ ಕೈಯಾಡಿಸಿ. ನಂತರ ಉಪ್ಪು ಹಾಕಿ ಮಿಶ್ರಣ ಮಾಡಿಕೊಳ್ಳಿ. ನಂತರ ಇದಕ್ಕೆ ಅನ್ನ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ನಿಂಬೆ ಹಣ್ಣಿನ ರಸ ಸೇರಿಸಿ ಚೆನ್ನಾಗಿ ಕೈಯಾಡಿಸಿ ಕೊತ್ತಂಬರಿಸೊಪ್ಪಿನಿಂದ ಅಲಂಕರಿಸಿ