ಆ. 31ರ ಗುರುವಾರ ದೇಶದಾದ್ಯಂತ ರಕ್ಷಾಬಂಧನ ಆಚರಿಸಲಾಗುವುದು. ರಕ್ಷಾ ಬಂಧನದ ದಿನ ರಾಖಿ ಕಟ್ಟುವ ಮೊದಲು ಸಹೋದರರಿಗೆ ಸಿಹಿ ತಿನ್ನಿಸಲಾಗುತ್ತದೆ. ಸಿಹಿ ಎಂದ ತಕ್ಷಣ ಮಿಠಾಯಿ ಅಥವಾ ಮಾರುಕಟ್ಟೆಯಲ್ಲಿ ಸಿಗುವ ತಿಂಡಿ ನೆನಪಾಗುತ್ತದೆ. ಆದ್ರೆ ಇದನ್ನು ಬಿಟ್ಟು ಬೇರೆ ಸಿಹಿ ತಿಂಡಿಯನ್ನು ಕೂಡ ನೀವು ನೀಡಬಹುದು.
ರಕ್ಷಾ ಬಂಧನದ ದಿನ ಫ್ರೂಟ್ ಕ್ರೀಮ್ ತಯಾರಿಸಿ, ಸಹೋದರನಿಗೆ ನೀಡಿ. ಮಾರುಕಟ್ಟೆಯಲ್ಲಿ ಸಿಗುವ ಹಾಲಿನ ಕೆನೆಯನ್ನು ತನ್ನಿ. ಹಣ್ಣುಗಳನ್ನು ಸಣ್ಣದಾಗಿ ಕತ್ತರಿಸಿ.ನಂತ್ರ ಕೆನೆಯನ್ನು ಹಣ್ಣುಗಳ ಜೊತೆ ಚೆನ್ನಾಗಿ ಮಿಕ್ಸ್ ಮಾಡಿ.ಇದರ ರುಚಿ ಭಿನ್ನವಾಗಿರುತ್ತದೆ. ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ.
ಹಬ್ಬದ ಮಜ ಹೆಚ್ಚಿಸಲು ನೀವು ಹಲ್ವಾ ಕೂಡ ತಯಾರಿಸಬಹುದು. ರವೆ ಹಲ್ವಾ, ಸೋರೆಕಾಯಿ ಹಲ್ವಾ, ಕ್ಯಾರೆಟ್ ಹಲ್ವಾ ಹೀಗೆ ಬೇರೆ ಬೇರೆ ಹಲ್ವಾ ಮಾಡಬಹುದು. ನಿಮ್ಮ ಸಹೋದರನಿಗೆ ಇಷ್ಟವಾಗುವ ಹಲ್ವಾ ಮಾಡಿ, ಸರ್ವ್ ಮಾಡಿ.
ಚಾಕೊಲೇಟ್ ಡೋನಟ್ಸ್ ಕೂಡ ನೀವು ತಯಾರಿಸಬಹುದು. ಸಹೋದರರು ಇದನ್ನು ಇಷ್ಟಪಟ್ಟು ತಿನ್ನುತ್ತಾರೆ. ಹಾಗೆ ಖೀರ್ ಕೂಡ ಮಾಡಬಹುದು. ಒಣ ಹಣ್ಣುಗಳು,ಅಕ್ಕಿ,ಸೋರೆಕಾಯಿ ಸೇರಿದಂತೆ ಬೇರೆ ಬೇರೆ ಖೀರ್ ತಯಾರಿಸಬಹುದು.