ಮನೆಯಲ್ಲಿ ಮಕ್ಕಳಿರುವಾಗ ಕೆಲವಷ್ಟು ಸಂಗತಿಗಳ ಬಗ್ಗೆ ನೀವು ಕಡ್ಡಾಯವಾಗಿ ಗಮನ ಕೊಡಬೇಕಾಗುತ್ತದೆ. ಅವುಗಳು ಯಾವುದೆಂದು ತಿಳಿಯೋಣ.
ಸಣ್ಣ ಮಕ್ಕಳಿಗೆ ಅದರಲ್ಲೂ ಮೂರು ವರ್ಷದೊಳಗಿನ ಮಕ್ಕಳು ಇರುವ ಮನೆಯಲ್ಲಿ ಅಲರ್ಜಿಯಾಗದಂತೆ ಹೆಚ್ಚಿನ ಎಚ್ಚರ ವಹಿಸಬೇಕು.
ಕೆಲವು ಮಕ್ಕಳಿಗೆ ಊದುಬತ್ತಿಯ ಹೊಗೆಯಿಂದ ಕೆಮ್ಮು, ದಮ್ಮು ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುವುದುಂಟು. ಹಾಗಾಗಿ ಹೊಗೆ ಇರುವ ಜಾಗಕ್ಕೆ ಮಕ್ಕಳನ್ನು ಹೆಚ್ಚು ಕರೆದೊಯ್ಯದೆ ಇರುವುದು ಒಳ್ಳೆಯದು.
ಇರುವೆ ಅಥವಾ ಜಿರಳೆ ಹೆಚ್ಚಿದೆ ಎಂಬ ಕಾರಣಕ್ಕೆ ವಿಷಾನಿಲಗಳನ್ನು ಸ್ಪ್ರೇ ಮಾಡುವ ಅಭ್ಯಾಸ ನಿಮಗಿದ್ದರೆ ಮೊದಲು ಅದನ್ನು ಬಿಟ್ಟುಬಿಡಿ. ಈ ವಿಷಾನಿಲ ಮಕ್ಕಳ ಉಸಿರಿನ ಮೂಲಕ ದೇಹದೊಳಗೆ ಹೊಕ್ಕರೆ ವಾಂತಿ, ಬೇಧಿಯಂತಹ ಸಮಸ್ಯೆಗಳು ಕಂಡು ಬರಬಹುದು. ಹಾಗಾಗಿ ತಪ್ಪಿಯೂ ಇವುಗಳನ್ನು ಮನೆಯಲ್ಲಿ ಬಳಸದಿರಿ.
ಬಿಸಿ ವಸ್ತುಗಳನ್ನು ಮಕ್ಕಳ ಕೈಗೆ ಎಟುಕದಂತೆ ಮೇಲೆ ಇಡಿ. ಅನ್ನ, ಸಾಂಬಾರು, ಬಿಸಿ ನೀರು ಮತ್ತಿತರ ಬಿಸಿ ವಸ್ತುಗಳನ್ನು ಅಡುಗೆ ಮನೆಯಲ್ಲಿ ಮಕ್ಕಳ ಕೈಗೆ ಸಿಕ್ಕದಂತೆ ಮೇಲಿಡಿ. ಕತ್ತಿ, ಚಾಕು ಬಗ್ಗೆಯೂ ಗಮನ ಹರಿಸಿ.