ಬೆಳಗಿನ ಆಹಾರ ಆರೋಗ್ಯಕರವಾಗಿರಬೇಕು. ದೀರ್ಘ ಕಾಲದವರೆಗೆ ಹೊಟ್ಟೆ ತುಂಬಿದಂತೆ ಭಾಸವಾಗಬೇಕು. ಪ್ರತಿ ದಿನ ಒಂದೇ ಆಹಾರ ಸೇವನೆ ಮಾಡಿ ಬೇಸರಗೊಂಡಿರುವವರು ಪ್ರೋಟೀನ್ ಭರಿತ ಪನೀರ್ ಕಾರ್ನ್ ಸ್ಯಾಂಡ್ವಿಚ್ ಮಾಡಿ ಸೇವಿಸಬಹುದು.
ಪನೀರ್ ಕಾರ್ನ್ ಸ್ಯಾಂಡ್ವಿಚ್ ಮಾಡಲು ಬೇಕಾಗುವ ಪದಾರ್ಥ:
ಬ್ರೆಡ್ ಚೂರುಗಳು – 6
ಪನೀರ್ – 100 ಗ್ರಾಂ
ಕಾರ್ನ್ – 50 ಗ್ರಾಂ
ಈರುಳ್ಳಿ – 1 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಕೆಂಪು ಮೆಣಸಿನಕಾಯಿ ಪುಡಿ – ರುಚಿಗೆ ತಕ್ಕಷ್ಟು
ಟೊಮೆಟೊ ಸಾಸ್ – 1 ಚಮಚ
ಓರೆಗಾನೊ – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – 1 ಚಮಚ
ಪನ್ನೀರ್ ಕಾರ್ನ್ ಸ್ಯಾಂಡ್ವಿಚ್ ಮಾಡುವ ವಿಧಾನ :
ಒಂದು ಬಟ್ಟಲಿಗೆ ಪನ್ನೀರ್, ಕಾರ್ನ್, ಈರುಳ್ಳಿ, ಉಪ್ಪು, ಮೆಣಸಿನಕಾಯಿ ಪುಡಿ ಮತ್ತು ಓರೆಗಾನೊ ಸೇರಿಸಿ. ಬ್ರೆಡ್ ಚೂರುಗಳಿಗೆ ಟೊಮೊಟೊ ಸಾಸ್ ಹಚ್ಚಿ. ಅದ್ರ ಮೇಲೆ ಕಾರ್ನ್ ಮಿಶ್ರಣವನ್ನು ಹಾಕಿ. ಇನ್ನೊಂದು ಬ್ರೆಡ್ ಗೆ ಟೊಮೊಟೊ ಸಾಸ್ ಹಚ್ಚಿ ಬ್ರೆಡ್ ಚೂರನ್ನು ಮುಚ್ಚಿ. ಪ್ಯಾನ್ ಅಥವಾ ಸ್ಯಾಂಡ್ವಿಚ್ ತಯಾರಕಕ್ಕೆ ಹಾಕಿ ಬೇಯಿಸಿ. ಸಾಸ್ ಜೊತೆ ಪನೀರ್ ಕಾರ್ನ್ಸ್ ಸ್ಯಾಂಡ್ವಿಚ್ ಸರ್ವ್ ಮಾಡಿ.