ಜ್ಯೂಸ್, ಸಲಾಡ್‌ಗಿಂತ ಚಾಟ್ಸ್, ಚಿಪ್ಸ್ ಈ ರೀತಿಯ ತಿನಿಸುಗಳನ್ನು ತಿನ್ನಲು ಇಷ್ಟಪಡುತ್ತೇವೆ. ಹೀಗಾಗಿ ಆಲೂಗಡ್ಡೆ ಬಳಸಿ ಮಾಡಬಹುದಾದ ರುಚಿಕಟ್ಟಾದ ಚಾಟ್ಸ್ ರೆಸಿಪಿ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು
ಚಿಕ್ಕ ಆಲೂಗಡ್ಡೆ – 6
ಟೊಮೆಟೊ – 3-4
ಕೊತ್ತಂಬರಿ ಸೊಪ್ಪು ಸ್ವಲ್ಪ
ಚಿಲ್ಲಿ ಫ್ಲೇಕ್ಸ್
ದಾಳಿಂಬೆ ಬೀಜ – 4 ಚಮಚ
ಈರುಳ್ಳಿ – 3
ಹಸಿ ಮೆಣಸಿನಕಾಯಿ – 4
ಚಾಟ್ ಮಸಾಲ
ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಬೇಬಿ ಪೊಟೆಟೊಗಳನ್ನು 2 ಭಾಗ ಮಾಡಿ. ಟೊಮೆಟೊ, ಈರುಳ್ಳಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪನ್ನು ಕತ್ತರಿಸಿ ಒಂದು ತಟ್ಟೆಯಲ್ಲಿಡಿ. ಈಗ ಎಣ್ಣೆಯನ್ನು ಬಿಸಿ ಮಾಡಿ, ಅದಕ್ಕೆ ಕತ್ತರಿಸಿದ ಆಲೂಗಡ್ಡೆ ಹಾಕಿ ಅದು ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.
ನಂತರ ಬೌಲ್ ಗೆ ಕರಿದ ಆಲೂ, ಟೊಮೆಟೊ, ಈರುಳ್ಳಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಚಾಟ್ ಮಸಾಲ, ಚಿಲ್ಲಿ ಫ್ಲೇಕ್ಸ್, ಸ್ವಲ್ಪ ಉಪ್ಪು ಹಾಕಿ ಮಿಕ್ಸ್ ಮಾಡಿ. ಈಗ ಅದನ್ನು ಪ್ಲೇಟ್‌ಗೆ ಹಾಕಿ ದಾಳಿಂಬೆ ಬೀಜದಿಂದ ಅಲಂಕರಿಸಿ ಸರ್ವ್ ಮಾಡಿ.