ಇಟಲಿಯ ಆಟೋಮೊಬೈಲ್ ದಿಗ್ಗಜ ಪಿಯಾಜಿಯೋದ ಭಾರತದ ಅಂಗಸಂಸ್ಥೆ ಚೆನ್ನೈನಲ್ಲಿ ತನ್ನ ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಘಟಕ ಆರಂಭಿಸಿದೆ.
ತಮಿಳುನಾಡಿನ ವೈದ್ಯಕೀಯ ಹಾಗೂ ಕುಟುಂಬ ಕಲ್ಯಾಣ ಸಚಿವ ಎಂ.ಎ. ಸುಬ್ರಮಣಿಯಂ ಕಂಪೆನಿಯ ಶೋರೂಂ ಅನ್ನು ಉದ್ಘಾಟಿಸಿದ್ದಾರೆ. ಈ ಶೋರೂಂನಲ್ಲಿ ಪಿಯಾಜಿಯೋದ ಎಲ್ಲಾ ಇವಿ ವಾಹನಗಳನ್ನು ನೋಡಬಹುದಾಗಿದೆ.
“ನಮ್ಮ ಮೊದಲ ಇವಿ ಎಕ್ಸ್‌ಕ್ಲೂಸಿವ್ ಶೋರೂಂ ಅನ್ನು ಚೆನ್ನೈನಲ್ಲಿ ತೆರೆಯಲು ಖುಷಿಯಾಗುತ್ತಿದೆ. ಮೆಟ್ರೋ ನಗರವಾಗಿರುವ ಚೆನ್ನೈ ದೊಡ್ಡ ಉದ್ಯಮದ ಬಿಂದುವಾಗಿದ್ದು, ಅಂತರ ನಗರ ಸಾರಿಗೆ ವಹಿವಾಟು ಆರ್ಥಿಕತೆಗೆ ಬಹಳ ಉತ್ತೇಜನ ನೀಡುತ್ತದೆ. ಮುಂದಿನ ದಿನಗಳಲ್ಲಿ ತಮಿಳುನಾಡಿನ ಎಲ್ಲೆಡೆ ಇವಿ ವಾಹನಗಳ ಜಾಲವನ್ನು ವಿಸ್ತರಿಸುವ ಆಶಯ ಕಂಪನಿಯದ್ದು” ಎಂದು ಪಿಯಾಜಿಯೋ ಇಂಡಿಯಾದ ವಾಣಿಜ್ಯ ವಾಹನ ವಿಭಾಗದ ಮುಖ್ಯಸ್ಥ ಸಜು ನಾಯರ್ ತಿಳಿಸಿದ್ದಾರೆ.
ಸ್ಥಿರ ಬ್ಯಾಟರಿ ಚಾಲಿತ ಎಫ್‌ಎಕ್ಸ್ ರೇಂಜ್‌ನ ಎಲೆಕ್ಟ್ರಿಕ್ ವಾಹನಗಳನ್ನು ಕಾರ್ಗೋ ಹಾಗೂ ಪ್ರಯಾಣಿಕ ವಾಹನಗಳ ವಿಭಾಗದಲ್ಲಿ ಪಿಯಾಜಿಯೋ ಇತ್ತೀಚೆಗೆ ಬಿಡುಗಡೆ ಮಾಡಿದೆ.
ದೇಶದಲ್ಲಿ ಇವಿ ವಾಹನ ಉತ್ಪಾದನೆ ಹಾಗೂ ಮಾರಾಟ ಕ್ಷೇತ್ರ ಗಣನೀಯವಾಗಿ ವೃದ್ಧಿಯಾಗುತ್ತಿದ್ದು, ಹೊಸ ಹೊಸ ಕಂಪನಿಗಳು ಮಾರುಕಟ್ಟೆಯಲ್ಲಿ ಪೈಪೋಟಿಗೆ ಪ್ರಯತ್ನಿಸುತ್ತಿದೆ.