
ಕೋಸಂಬರಿ ಎಂದರೆ ಸಾಮಾನ್ಯವಾಗಿ ಕಡಲೇ ಬೆಲೆ, ಹೆಸರು ಬೇಳೆ ಕೋಸಂಬರಿ ನೆನಪಾಗುತ್ತದೆ. ಹೆಸರು ಕಾಳಿನ ಮೊಳಕೆ ಬರಿಸಿ ಕೋಸಂಬರಿ ಮಾಡಿದರಂತೂ ಇನ್ನೂ ಉತ್ತಮ.
ಆದರೆ ಕಾಳು, ಬೆಳೆಗಳನ್ನು ನೆನೆಸಲು ಮರೆತಿದ್ದರೆ ಅಥವಾ ಸಮಯದ ಅಭಾವ ಇದ್ದರೆ ಅಂತಹ ಸಮಯದಲ್ಲಿ ಬೇಳೆ ಕಾಳುಗಳು ಇಲ್ಲದೆಯೇ ಈ ರೀತಿ ಕೋಸಂಬರಿ ಮಾಡಿ.
ಹೆಚ್ಚಿದ ಸೌತೆಕಾಯಿ – 1 ಬಟ್ಟಲು
ಕಾಯಿ ತುರಿ – 1/2 ಬಟ್ಟಲು
ತುರಿದ ಕ್ಯಾರೆಟ್ – 1-/2 ಬಟ್ಟಲು
ದಾಳಿಂಬೆ ಕಾಳು – 1 ಹಿಡಿ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಉಪ್ಪು – ರುಚಿಗೆ
ನಿಂಬೆ ರಸ – ಅರ್ಧ ಹೋಳು.
ಮೇಲೆ ತಿಳಿಸಿದ ಅಷ್ಟೂ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ ಇದಕ್ಕೆ ಹಸಿ ಮೆಣಸಿನಕಾಯಿ ಒಗ್ಗರಣೆ ಕೊಟ್ಟರೆ ಐದೇ ನಿಮಿಷದಲ್ಲಿ ಕೋಸಂಬರಿ ರೆಡಿ ಮಾಡಬಹುದು.