ಕಪ್ಪು ಕಲೆ ಮತ್ತು ಸನ್ ಟ್ಯಾನ್ ಅನ್ನು ತೆಗೆದು ಹಾಕುವ ಸರಳವಾದ ಫೇಶಿಯಲ್ ಒಂದನ್ನು ಮನೆಯಲ್ಲೇ ಹೇಗೆ ತಯಾರಿಸಬಹುದು ಎಂಬುದನ್ನು ನೋಡೋಣ.
ಮೊದಲಿಗೆ ಟೊಮೆಟೊ ಹಣ್ಣನ್ನು ಕತ್ತರಿಸಿ ಅದರ ಮೇಲೆ ಕಾಫಿ ಪುಡಿ ಸುರಿದುಕೊಂಡು ಅದನ್ನು ಮುಖದ ಮೇಲೆ ಮಸಾಜ್ ಮಾಡಿ. 15 ನಿಮಿಷದ ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ. ಮೊದಲನೆಯ ಹಂತ ಕ್ಲೆನ್ಸಿಂಗ್ ಇಲ್ಲಿಗೆ ಮುಗಿಯಿತು.
ಎರಡನೆಯ ಹಂತ ಸ್ಕ್ರಬ್ಬಿಂಗ್. ಇಲ್ಲಿ ಒಂದು ಚಮಚ ಕಾಫಿ ಪುಡಿಗೆ ಅಷ್ಟೇ ಪ್ರಮಾಣದ ಅಕ್ಕಿ ಹಿಟ್ಟು ಹಾಕಿ. ಅರ್ಧ ಚಮಚ ನಿಂಬೆ ರಸ ಬೆರೆಸಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ. ಮಸಾಜ್ ಮಾಡಿ. ಈ ಸ್ಕ್ರಬ್ಬಿಂಗ್ ನಿಮ್ಮ ತ್ವಚೆಯ ಬ್ಲಾಕ್ ಹೆಡ್, ಡೆಡ್ ಸ್ಕಿನ್ ತೆಗೆದುಹಾಕಲು ನೆರವಾಗುತ್ತದೆ. ನಿಮ್ಮ ತ್ವಚೆಯನ್ನು ಮೃದುವಾಗಿಸುತ್ತದೆ.
ಐದು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆಯಿರಿ. ಮೂರನೆಯ ಹಂತ ಫೇಸ್ ಪ್ಯಾಕ್. ಇದಕ್ಕೆ ಒಂದು ಚಮಚ ಕಾಫಿ ಪುಡಿಗೆ ಅಲೋವೇರಾ ಜೆಲ್ ಮತ್ತು ಎರಡು ಚಮಚ ಮುಲ್ತಾನಿ ಪುಡಿ, ಗಂಧದ ಪುಡಿ, ಟೊಮೆಟೊ ಜ್ಯೂಸ್ ಬೆರೆಸಿ ಮಿಶ್ರಣ ತಯಾರಿಸಿ. ಇದನ್ನು ಬಳಸುವುದರಿಂದ ಮುಖದ ಮೇಲಿನ ಕಪ್ಪು ಕಲೆಯೂ ದೂರವಾಗುತ್ತದೆ.
ಹದಿನೈದು ನಿಮಿಷದ ಬಳಿಕ ಮುಖ ತೊಳೆಯುವುದರಿಂದ ಮುಖದ ಹಲವು ಸಮಸ್ಯೆಗಳು ದೂರವಾಗುತ್ತವೆ ಮತ್ತು ತ್ವಚೆ ವಿಶೇಷ ಹೊಳಪು ಪಡೆದುಕೊಳ್ಳುತ್ತದೆ.