ಬೇಕಾಗುವ ಪದಾರ್ಥಗಳು : ಚಿರೋಟಿ ರವೆ- 1 ಕಪ್, ಕಡಲೆ ಹಿಟ್ಟು- 1/4 ಕಪ್, ಅಕ್ಕಿ ಹಿಟ್ಟು- 2 ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಕರಿಬೇವು- 1/2 ಕಪ್, ಹಸಿಮೆಣಸಿನಕಾಯಿ-2, ಜೀರಿಗೆ- 1 ಚಮಚ, ಮೊಸರು- 1/2 ಕಪ್, ಎಣ್ಣೆ.
ಮಾಡುವ ವಿಧಾನ : ಮೊದಲಿಗೆ 1/2 ಕಪ್ ಮೊಸರಿಗೆ 1/2 ಕಪ್ ನೀರು ಸೇರಿಸಿ ಮಜ್ಜಿಗೆ ಮಾಡಿಕೊಳ್ಳಿ, ಒಂದು ಅಗಲವಾದ ಪಾತ್ರೆಯಲ್ಲಿ ಚಿರೋಟಿ ರವೆ, ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಉಪ್ಪು ಮಿಶ್ರಣ ಮಾಡಿ. ಮಿಕ್ಸಿ ಜಾರಿಗೆ ಕರಿಬೇವು, ಜೀರಿಗೆ, ಹಸಿಮೆಣಸಿನಕಾಯಿ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ.
ಈ ಮಿಶ್ರಣವನ್ನು ರವೆಯ ಮಿಕ್ಸ್ ಗೆ ಮಿಕ್ಸ್ ಮಾಡಿ, ಎಲ್ಲವೂ ಹೊಂದಿಕೊಳ್ಳುವಂತೆ ಕೈಯಲ್ಲಿ ಚೆನ್ನಾಗಿ ಕಲೆಸಿ, ಮಜ್ಜಿಗೆ ಸೇರಿಸಿ. ಗಂಟಿಲ್ಲದಂತೆ ಹಿಟ್ಟನ್ನು ಕಲೆಸಿ 10 ನಿಮಿಷ ನೆನೆಯಲು ಬಿಡಿ. ಬಳಿಕ ಅಗತ್ಯವೆನಿಸಿದಷ್ಟು ನೀರು ಹಾಕಿ ಹಿಟ್ಟನ್ನು ಕಲೆಸಿಕೊಳ್ಳಿ. ದೋಸೆ ಹಂಚನ್ನು ಬಿಸಿ ಮಾಡಿ ಎಣ್ಣೆ ಹಾಕಿ ಕಾದ ನಂತರ ದೋಸೆ ಹಿಟ್ಟನ್ನು ಹರಡಿ. ಎಣ್ಣೆ ಹಾಕಿ 2 ಕಡೆ ಚೆನ್ನಾಗಿ ಬೇಯಿಸಿ. ತಯಾರಾದ ದೋಸೆಯನ್ನು ಪಲ್ಯ ಅಥವಾ ಸಾಗುವಿನೊಂದಿಗೆ ಸವಿಯಿರಿ.