ಜ್ಯೂಸ್ ಅಂದ್ರೆ ಅದರಲ್ಲಿ ಸಕ್ಕರೆ ಇರಲೇಬೇಕು. ಈಗ ಸಕ್ಕರೆ ತಿನ್ನುವವರ ಸಂಖ್ಯೆ ಕಡಿಮೆ ಇರುವುದರಿಂದ ಸಕ್ಕರೆ ರಹಿತ ಜ್ಯೂಸನ್ನು ಕೂಡ ತಯಾರಿಸಬಹುದು.
ಕೇವಲ ಸೌಂದರ್ಯಕಷ್ಟೇ ಅಲ್ಲದೇ ದೇಹಕ್ಕೂ ಹಿತವನ್ನು ನೀಡುವ ಅಲೋವೆರಾ ಜ್ಯೂಸ್ ಸಕ್ಕರೆ ಕಾಯಿಲೆಯವರಿಗೂ ಹೆಚ್ಚು ಪರಿಣಾಮಕಾರಿ. ಹಾಗಾದರೆ ಸುಲಭವಾಗಿ ಅಲೋವೆರಾ ಜ್ಯೂಸ್ ಮಾಡುವುದು ಹೇಗೆ ಗೊತ್ತಾ.
ಬೇಕಾಗುವ ಸಾಮಾಗ್ರಿಗಳು
ಲೋಳೆಸರದ ದಂಟು – 1
ನಿಂಬೆಹುಳಿ – 1/2 ಹೋಳು
ಉಪ್ಪು ಚಿಟಿಕೆಯಷ್ಟು
ಮಾಡುವ ವಿಧಾನ
ಲೋಳೆಸರದ ದಂಟನ್ನು ಕತ್ತರಿಸಿ ಚೆನ್ನಾಗಿ ತೊಳೆದು ಮುಳ್ಳು ಮತ್ತು ಸಿಪ್ಪೆಯನ್ನು ತೆಗೆದು ಒಳಗಿನ ತಿರುಳನ್ನು ಸಣ್ಣದಾಗಿ ಕಟ್ ಮಾಡಿ ಮಿಕ್ಸಿಗೆ ಹಾಕಿ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಬೇಕು. ಒಂದು ಲೋಟದಷ್ಟು ಜ್ಯೂಸ್ ತಯಾರಾದ ಮೇಲೆ ನಿಂಬೆರಸ ಮತ್ತು ಉಪ್ಪು ಸೇರಿಸಿ ಕುಡಿಯಿರಿ.