ಇಡ್ಲಿ, ದೋಸೆ ಮಾಡಿದಾಗ ನೆಂಚಿಕೊಳ್ಳುವುದಕ್ಕೆ ಏನಾದರೂ ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ಸುಲಭವಾಗಿ ಮಾಡಬಹುದಾದ ಹೆಸರುಬೇಳೆ ತೊವ್ವೆ ಇದೆ ಒಮ್ಮೆ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು: 1 ಕಪ್- ಹೆಸರು ಬೇಳೆ, ತೆಂಗಿನಕಾಯಿ ಹಾಲು-3 ಕಪ್, 2-3-ಒಣಮೆಣಸು, ಶುಂಠಿ-ಚಿಕ್ಕ ತುಂಡು, ಹಸಿ ಮೆಣಸಿನಕಾಯಿ – 1, ಈರುಳ್ಳಿ -1, ಉದ್ದಿನ ಬೇಳೆ- 1 ಟೀ ಸ್ಪೂನ್, ಸಾಸಿವೆ-1 ಟೀ ಸ್ಪೂನ್, 10ರಿಂದ 15 ಕರಿಬೇವಿನ ಎಲೆ, ಸ್ವಲ್ಪ ಕೊತ್ತಂಬರಿ ಸೊಪ್ಪು, ಎಣ್ಣೆ-1 ಚಮಚ, ರುಚಿಗೆ ತಕ್ಕಷ್ಟು-ಉಪ್ಪು.
ಮಾಡುವ ವಿಧಾನ: ಗ್ಯಾಸ್ ಮೇಲೆ ಕುಕ್ಕರ್ ಇಟ್ಟು ಅದಕ್ಕೆ ಹೆಸರುಬೇಳೆ, ಶುಂಠಿ, ಹಸಿಮೆಣಸು, ಒಂದು ಲೋಟ ನೀರು ಹಾಕಿ 2 ವಿಷಲ್ ಕೂಗಿಸಿಕೊಳ್ಳಿ. ಇದು ತಣ್ಣಗಾದ ಮೇಲೆ ವಿಷಲ್ ತೆಗೆದು ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಇದಕ್ಕೆ ತೆಂಗಿನಕಾಯಿ ಹಾಲು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ.
ನಂತರ ಗ್ಯಾಸ್ ಮೇಲೆ ಪ್ಯಾನ್ ಇಟ್ಟು ಅದು ಬಿಸಿಯಾದ ಮೇಲೆ ಅದಕ್ಕೆ ಎಣ್ಣೆ ಸಾಸಿವೆ, ಈರುಳ್ಳಿ, ಕರಿಬೇವು, ಉದ್ದಿನ ಬೇಳೆ, ಒಣಮೆಣಸು ಹಾಕಿ ಫ್ರೈ ಮಾಡಿದ ಒಗ್ಗರಣೆಯನ್ನು ಕುಕ್ಕರಿಗೆ ಹಾಕಿ ನಂತರ ಕೊತ್ತಂಬರಿ ಸೊಪ್ಪು ಸೇರಿಸಿದರೆ ಹೆಸರು ಬೇಳೆ ತೊವ್ವೆ ರೆಡಿ.