alex Certify ಮನೆಯಲ್ಲೇ ಮಾಡಿ ಸವಿಯಿರಿ ʼಚನ್ನಾ ಮಸಾಲʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲೇ ಮಾಡಿ ಸವಿಯಿರಿ ʼಚನ್ನಾ ಮಸಾಲʼ

ಪೂರಿ, ಚಪಾತಿ ಮಾಡಿದಾಗ ಈ ಚನ್ನಾ ಮಸಾಲ ಮಾಡಿಕೊಂಡು ಸವಿಯುವುದಕ್ಕೆ ತುಂಬಾ ಚೆನ್ನಾಗಿರುತ್ತದೆ. ಅದು ಅಲ್ಲದೇ ಈ ಕಾಬೂಲ್ ಕಡಲೆಕಾಳಿನಲ್ಲಿ ಸಾಕಷ್ಟು ಪೋಷಕಾಂಶಗಳು ಕೂಡ ಇದೆ.

ರುಚಿಕರವಾಗಿ ಮನೆಯಲ್ಲಿಯೇ ಈ ಚನ್ನಾ ಮಸಾಲ ಮಾಡಿಕೊಂಡು ಸವಿಯಿರಿ.

1 ಕಪ್-ಕಾಬೂಲ್ ಕಡಲೆ, ನೀರು 3 ಕಪ್, ¼ ಟೀ ಸ್ಪೂನ್ ಉಪ್ಪು, 3 ಟೇಬಲ್ ಸ್ಪೂನ್- ತುಪ್ಪ, ½ ಟೀ ಸ್ಪೂನ್-ಅರಿಶಿನ, ¼ ಟೀ ಸ್ಪೂನ್-ಖಾರದಪುಡಿ, 1 ಟೀ ಸ್ಪೂನ್-ಕೊತ್ತಂಬರಿ ಪುಡಿ, 1 ಚಿಟಿಕೆ-ಇಂಗು, 1.5 ಕಪ್-ನೀರು, ಉಪ್ಪು-ರುಚಿಗೆ ತಕ್ಕಷ್ಟು, -ಹಸಿಮೆಣಸು, 1 ಟೀ ಸ್ಪೂನ್-ಗರಂ ಮಸಾಲ, 1 –ಈರುಳ್ಳಿ, 2-ಟೊಮೆಟೊ, 1 ಇಂಚು-ಶುಂಠಿ, 5 ಎಸಳು-ಬೆಳ್ಳುಳ್ಳಿ, 1-ಹಸಿಮೆಣಸು.

ಮೊದಲಿಗೆ ಕಡಲೆಕಾಳನ್ನು 8 ಗಂಟೆಗಳ ಕಾಲ ನೆನೆಸಿಡಿ. ನಂತರ ಕುಕ್ಕರ್ ಗೆ 3 ಕಪ್ ನೀರು ಹಾಕಿ ಸ್ವಲ್ಪ ಉಪ್ಪು ಹಾಕಿ 2 ವಿಷಲ್ ಕೂಗಿಸಿಕೊಳ್ಳಿ.

ನಂತರ ಒಂದು ಮಿಕ್ಸಿ ಜಾರಿಗೆ ಕತ್ತರಿಸಿದ ಈರುಳ್ಳಿ, ಟೊಮೆಟೊ, ಶುಂಠಿ, ಹಸಿಮೆಣಸು, ಬೆಳ್ಳುಳ್ಳಿ ಹಾಕಿ ನಯವಾಗಿ ರುಬ್ಬಿಕೊಳ್ಳಿ. ನಂತರ ಒಂದು ಬಾಣಲೆಗೆ ತುಪ್ಪ ಹಾಕಿ ಗ್ಯಾಸ್ ಮೇಲೆ ಇಡಿ. ಅದು ಬಿಸಿಯಾಗುತ್ತಲೆ ಜೀರಿಗೆ, ಪಲಾವ್ ಎಲೆ, ಚಕ್ಕೆ, ಲವಂಗ, 2 ಏಲಕ್ಕಿ, 3 ಕಾಳು ಮೆಣಸಿನಕಾಳು ಹಾಕಿ ಹುರಿದುಕೊಳ್ಳಿ.

ನಂತರ ಇದಕ್ಕೆ ರುಬ್ಬಿಟ್ಟುಕೊಂಡ ಮಸಾಲ ಹಾಕಿ 8 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ನಂತರ ಇದಕ್ಕೆ ಅರಿಶಿನಪುಡಿ, ಖಾರದಪುಡಿ, ಕೊತ್ತಂಬರಿಪುಡಿ, ಇಂಗು ಹಾಕಿ ಚೆನ್ನಾಗಿ ಕೈಯಾಡಿಸಿ. ನಂತರ ಬೇಯಿಸಿದ ಕಡಲೆಕಾಳು ಹಾಕಿ. ಅದಕ್ಕೆ 1.5 ಕಪ್ ನೀರು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 15 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ನಂತರ 1 ಹಸಿಮೆಣಸು, 1 ಟೀ ಸ್ಪೂನ್ ಗರಂ ಮಸಾಲ ಸೇರಿಸಿ ಕೈಯಾಡಿಸಿ. ಕೊತ್ತಂಬರಿಸೊಪ್ಪಿನಿಂದ ಅಲಂಕರಿಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...