ನೆಲ್ಲಿಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಹಾಗೇ ಸವಿಯಲು ಇಷ್ಟಪಡದವರು ಇದರ ಚಟ್ನಿ ಹಾಗೂ ರೈಸ್ ಮಾಡಿಕೊಂಡು ಸವಿಯಬಹುದು. ಇಲ್ಲಿ ಸುಲಭವಾಗಿ ಮಾಡಬಹುದಾದ ನೆಲ್ಲಿಕಾಯಿ ರೈಸ್ ಬಾತ್ ಇದೆ. ಟ್ರೈ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು:
ಒಂದು ಕಪ್ – ಅನ್ನ, ಉದ್ದಿನಬೇಳೆ – 1ಚಮಚ, ಕಡಲೆಬೇಳೆ – 1 ಚಮಚ, 2 ಒಣಮೆಣಸು, ಸಾಸಿವೆ – 1 ಟೀ ಸ್ಪೂನ್, ಕರಿಬೇವು – 10 ಎಸಳು. ಕೊತ್ತಂಬರಿಸೊಪ್ಪು – 1 ಟೇಬಲ್ ಸ್ಪೂನ್, ಇಂಗು – ಚಿಟಿಕೆ, ಶುಂಠಿ ತುರಿ – 1 ಟೀ ಸ್ಪೂನ್, ಹಸಿಮೆಣಸು – 2, ನೆಲ್ಲಿಕಾಯಿ – 3 (ತುರಿದಿಟ್ಟುಕೊಳ್ಳಿ), 1 ಚಮಚ – ಎಣ್ಣೆ.
ಮಾಡುವ ವಿಧಾನ:
ಮೊದಲಿಗೆ 1 ಕಪ್ ಅನ್ನವನ್ನು ಒಂದು ಅಗಲವಾದ ತಟ್ಟೆಗೆ ಹಾಕಿಕೊಂಡು ಅದಕ್ಕೆ ½ ಟೀ ಸ್ಪೂನ್ ಅರಿಶಿನ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಎಣ್ಣೆ ಹಾಕಿ ನಂತರ ಸಾಸಿವೆ, ಉದ್ದಿನಬೇಳೆ, ಕಡಲೆಬೇಳೆ, ಒಣಮೆಣಸು, ಇಂಗು ಹಾಕಿ 2 ನಿಮಿಷಗಳ ಕಾಲ ಫ್ರೈ ಮಾಡಿ.
ನಂತರ ಇದಕ್ಕೆ ಕರಿಬೇವು, ಹಸಿಮೆಣಸು, ಶುಂಠಿ, ನೆಲ್ಲಿಕಾಯಿ ತುರಿ ಹಾಕಿ ಮತ್ತೊಮ್ಮೆ ಮಿಕ್ಸ್ ಮಾಡಿಕೊಳ್ಳಿ. ನೆಲ್ಲಿಕಾಯಿ ತುರಿ ಸ್ವಲ್ಪ ಬೇಯುವವರಗೆ ಫ್ರೈ ಮಾಡಿಕೊಂಡು ಇದಕ್ಕೆ ಅನ್ನವನ್ನು ಸೇರಿಸಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿಕೊಂಡು ಗ್ಯಾಸ್ ಆಫ್ ಮಾಡಿ. ನಂತರ ಕೊತ್ತಂಬರಿಸೊಪ್ಪಿನಿಂದ ಅಲಂಕರಿಸಿ.