ಹಬ್ಬಕ್ಕೆ ಏನಾದರೂ ಸಿಹಿ ಮಾಡಿ ದೇವರಿಗೆ ನೈವೇದ್ಯ ಇಡುವ ಪದ್ಧತಿ ಇರುತ್ತದೆ. ಪಂಚಕಜ್ಜಾಯವಂತೂ ಎಲ್ಲರ ಮನೆಯಲ್ಲೂ ಮಾಡಿಯೇ ಮಾಡುತ್ತಾರೆ. ಇಲ್ಲಿ ಹೆಸರುಬೇಳೆ ಪಂಚಕಜ್ಜಾಯ ಮಾಡುವ ವಿಧಾನ ಇದೆ, ಟ್ರೈ ಮಾಡಿ.
½ ಕಪ್- ಹೆಸರುಬೇಳೆ, ½ ಕಪ್-ತೆಂಗಿನಕಾಯಿ ತುರಿ, ¼ ಕಪ್-ಬೆಲ್ಲದ ಪುಡಿ, 2 ಟೀ ಸ್ಪೂನ್-ತುಪ್ಪ, 8-ಗೋಡಂಬಿ, ½ ಟೀ ಸ್ಪೂನ್-ಏಲಕ್ಕಿ.
ಮೊದಲಿಗೆ ಒಂದು ಪಾತ್ರೆಗೆ ಬೆಲ್ಲ ಪುಡಿ ಮಾಡಿ ಹಾಕಿ ನಂತರ ಅದಕ್ಕೆ ತೆಂಗಿನಕಾಯಿ ತುರಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಟ್ಟುಕೊಳ್ಳಿ. ಗ್ಯಾಸ್ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಹೆಸರುಬೇಳೆ ಹಾಕಿ ಪರಿಮಳ ಬರುವವರಗೆ 5 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ.
ಇದು ತಣ್ಣಗಾದ ಮೇಲೆ ಒಂದು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಿ. ತುಂಬಾ ನಯವಾಗಿ ಪುಡಿಮಾಡಿಕೊಳ್ಳುವುದು ಬೇಡ.
ನಂತರ ಗ್ಯಾಸ್ ಮೇಲೆ ಪ್ಯಾನ್ ಇಟ್ಟು ಅದಕ್ಕೆ ತುಪ್ಪ ಹಾಕಿ ಗೋಡಂಬಿ ಸೇರಿಸಿ ಸ್ವಲ್ಪ ಹುರಿದುಕೊಳ್ಳಿ. ನಂತರ ಬೆಲ್ಲ ಹಾಗೂ ಕಾಯಿಯ ಮಿಶ್ರಣ ಸೇರಿಸಿ ಸ್ವಲ್ಪ ಫ್ರೈ ಮಾಡಿಕೊಂಡು ಅದೇ ಕೂಡಲೇ ಹೆಸರುಬೇಳೆ ಪುಡಿ, ಏಲಕ್ಕಿ ಪುಡಿ ಸೇರಿಸಿ ಫ್ರೈ ಮಾಡಿಕೊಂಡು ಗ್ಯಾಸ್ ಆಫ್ ಮಾಡಿ.