ಅರ್ಧ ಕಪ್ ತುಪ್ಪ, ಒಂದು ಕಪ್ ಬಾಸುಮತಿ ಅಕ್ಕಿ, ಅರ್ಧ ಲೀಟರ್ ಹಾಲು, ಏಲಕ್ಕಿ 2-3, ಒಂದು ಚಿಟಕಿ ಕೇಸರಿ, ಪಿಸ್ತಾ 10, ಒಂದುವರೆ ಕಪ್ ಸಕ್ಕರೆ.
ಕೇಸರಿ-ಪಿಸ್ತಾ ಕೀರ್ ಮಾಡುವ ವಿಧಾನ:
ಒಂದು ಪಾತ್ರೆಗೆ ತುಪ್ಪವನ್ನು ಹಾಕಿ ಬಿಸಿ ಮಾಡಿ. ಅದಕ್ಕೆ ಅಕ್ಕಿಯನ್ನು ಹಾಕಿ ಪ್ರೈ ಮಾಡಿ. ಆದ್ರೆ ಅಕ್ಕಿ ಕೆಂಪಾಗಲು ಬಿಡಬೇಡಿ. ನಂತ್ರ ಇನ್ನೊಂದು ಪಾತ್ರೆಯಲ್ಲಿ ಹಾಲನ್ನು ಕುದಿಸಲು ಇಡಿ. ಅದಕ್ಕೆ ಸಕ್ಕರೆಯನ್ನು ಹಾಕಿ.
ಹಾಲು ತಳ ಹಿಡಿಯದಂತೆ ನೋಡಿಕೊಳ್ಳಿ. ನಂತ್ರ ಏಲಕ್ಕಿ, ಕೇಸರಿ ಹಾಗೂ ಸಣ್ಣಗೆ ಕಟ್ ಮಾಡಿರುವ ಪಿಸ್ತಾವನ್ನು ಹಾಕಿ. ಆಮೇಲೆ ಹಾಲಿಗೆ ಅಕ್ಕಿಯನ್ನು ಹಾಕಿ ಬೇಯಿಸಿ. ಅಕ್ಕಿ ಬೆಂದ ನಂತ್ರ ಗ್ಯಾಸ್ ಬಂದ್ ಮಾಡಿ. ಸ್ವಲ್ಪ ತಣ್ಣಗಾದ ಮೇಲೆ ಫ್ರಿಜ್ ನಲ್ಲಿಟ್ಟು, ತಣ್ಣ ತಣ್ಣನೆಯ ಕೀರನ್ನು ಮನೆಯವರಿಗೆ ನೀಡಿ.