ಗ್ರೀನ್ ಟೀ ಒಂದು ಗಿಡಮೂಲಿಕೆ ಚಹಾ. ಇದನ್ನು ಕುಡಿಯುವುದರಿಂದ ಆರೋಗ್ಯಕ್ಕೆ ತುಂಬಾ ಉತ್ತಮ. ಇದರಿಂದ ದೇಹದ ತೂಕವನ್ನು ಕೂಡ ಇಳಿಸಿಕೊಳ್ಳಬಹುದು. ಅಷ್ಟು ಮಾತ್ರವಲ್ಲ ತ್ವಚೆಯ ಸಮಸ್ಯೆಯನ್ನು ಕೂಡ ಈ ಗ್ರೀನ್ ಟೀಯಿಂದ ಪರಿಹರಿಸಿಕೊಳ್ಳಬಹುದು. ಅದು ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ.
ಮೊದಲನೇಯದಾಗಿ ಗ್ರೀನ್ ಟೀಯನ್ನು ನೀರಿನಲ್ಲಿ ಕುದಿಸಿ ಆ ನೀರಿನಿಂದ ಮುಖಕ್ಕೆ ಸ್ಟೀಮ್ ತೆಗೆದುಕೊಳ್ಳಿ. ಇದರಿಂದ ಮುಖದಲ್ಲಿ ಸೇರಿಕೊಂಡಿರುವ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ.
ಎರಡನೇಯದಾಗಿ ಬಿಸಿಲಿನ ಬೇಗೆಯಿಂದ ನಿಮ್ಮ ಮುಖದ ಸ್ಕಿನ್ ಉರಿಯುತ್ತಿದ್ದರೆ ಗ್ರೀನ್ ಟೀ ತಯಾರಿಸಿ ತಣ್ಣಗಾಗಿಸಿ ಒಂದು ಹತ್ತಿ ಬಟ್ಟೆಯನ್ನು ಅದರಲ್ಲಿ ಅದ್ದಿ ಮುಖಕ್ಕೆ ಇಟ್ಟುಕೊಳ್ಳಿ. ಇದರಿಂದ ಬಿಸಿಲಿನ ತಾಪಕ್ಕೆ ಮುಖದ ಸ್ಕಿನ್ ಗೆ ಹಾನಿಯಾಗುವುದ ತಪ್ಪುತ್ತದೆ.
ಮೂರನೇಯದಾಗಿ ಗ್ರೀನ್ ಟೀ ತಯಾರಿಸಿ ಅದಕ್ಕೆ ನೀವು ಬಳಸುವ ಕ್ಲೆನ್ಸರ್ ನ್ನು ಮಿಕ್ಸ್ ಮಾಡಿ 5 ನಿಮಿಷಗಳ ಕಾಲ ಮುಖಕ್ಕೆ ಮಸಾಜ್ ಮಾಡಿ. ಬಳಿಕ ವಾಶ್ ಮಾಡಿ. ಇದರಿಂದ ರಕ್ತ ಸಂಚಾರ ಹೆಚ್ಚಾಗಿ ಮುಖದಲ್ಲಿ ಉಂಟಾಗುವ ಮೊಡವೆಗಳ ವಿರುದ್ಧ ಹೋರಾಡಲು ನಿಮಗೆ ಸಹಕಾರಿಯಾಗಿದೆ.
ನಾಲ್ಕನೇಯದಾಗಿ ಗ್ರೀನ್ ಟೀಯಿಂದ ಫೇಸ್ ಮಾಸ್ಕ್ ತಯಾರಿಸಿ ಬಳಸಿ. ಇದಕ್ಕೆ 1 ಚಮಚ ಜೇನುತುಪ್ಪ, 2 ಚಮಚ ಆಲೀವ್ ಆಯಿಲ್ ಇವೆರಡನ್ನು ಮಿಕ್ಸ್ ಮಾಡಿ ಮೈಕ್ರೋವೇವ್ ನಲ್ಲಿ 30 ಸೆಕೆಂಡುಗಳ ಕಾಲ ಬಿಸಿ ಮಾಡಿ. ಬಳಿಕ ಅದಕ್ಕೆ ಗ್ರೀನ್ ಟೀ ಎಲೆಗಳ ಪುಡಿಯನ್ನು ಮಿಕ್ಸ್ ಮಾಡಿ ಮತ್ತೆ 30 ಸೆಕೆಂಡುಗಳ ಕಾಲ ಬಿಸಿ ಮಾಡಿ ಇದು ಬೆಚ್ಚಗಿರುವಾಗಲೇ ಮುಖಕ್ಕೆ ಹಚ್ಚಿ 5 ನಿಮಿಷ ಮಸಾಜ್ ಮಾಡಿ ವಾಶ್ ಮಾಡಿ. ಇದರಿಂದ ಆರೋಗ್ಯಕರವಾದ ಸ್ಕಿನ್ ಪಡೆಯಬಹುದು.