ಈಗ ಮಾವಿನ ಹಣ್ಣಿನ ಸೀಸನ್. ಪ್ರತಿದಿನ ಮಾವಿನಹಣ್ಣಿನಲ್ಲಿ ಏನೆಲ್ಲಾ ವಿಶೇಷವಾಗಿ ಖಾದ್ಯ ತಯಾರಿಸಬಹುದು ಅಂತ ಯೋಚಿಸುತ್ತಿರುವವರು ಮಾವಿನಹಣ್ಣಿನ ಸೀಕರಣೆ ಟ್ರೈ ಮಾಡಿ ನೋಡಿ.
ಮತ್ತೆ ಮತ್ತೆ ಮಾಡಿ ಕೊಂಡು ತಿನ್ನಬೇಕು ಎನಿಸುವಷ್ಟು ರುಚಿಯಾಗಿರುತ್ತದೆ. ಹಾಗಾದರೆ ಈ ಸೀಕರಣೆ ಮಾಡುವ ವಿವರ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು
ಮಾವಿನ ಹಣ್ಣಿನ ತಿರುಳು 2 ಬಟ್ಟಲು
ದಪ್ಪ ತೆಂಗಿನಕಾಯಿ ಹಾಲು 1 ಬಟ್ಟಲು
ಪುಡಿ ಸಕ್ಕರೆ 2 ಚಮಚ
ತೆಂಗಿನಕಾಯಿಯ ಚೂರು 50 ಗ್ರಾಂ
ಉಪ್ಪು ಚಿಟಿಕೆಯಷ್ಟು
ಮಾಡುವ ವಿಧಾನ
ಮಿಕ್ಸಿ ಜಾರಿಗೆ ಮಾವಿನ ಹಣ್ಣಿನ ತಿರುಳು, ತೆಂಗಿನಕಾಯಿಯ ಹಾಲು ಹಾಗೂ ಸಕ್ಕರೆ ಸೇರಿಸಿ ರುಬ್ಬಿಕೊಳ್ಳಬೇಕು. ರುಬ್ಬಿಕೊಂಡ ಮಿಶ್ರಣಕ್ಕೆ ಚಿಟಿಕೆಯಷ್ಟು ಉಪ್ಪು ಹಾಗೂ ತೆಂಗಿನ ಕಾಯಿಯ ಚೂರನ್ನು ಸೇರಿಸಿ ಚೆನ್ನಾಗಿ ಕಲಸಬೇಕು. ಈಗ ಮಾವಿನ ಹಣ್ಣಿನ ಸೀಕರಣೆ ಸವಿಯಲು ಸಿದ್ಧ. ಹೋಳಿಗೆ ಜೊತೆ ಇದರ ಕಾಂಬಿನೇಷನ್ ಸಖತ್ತಾಗಿರುತ್ತದೆ.