ಮಕರ ಸಂಕ್ರಾಂತಿ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಮಕರ ಸಂಕ್ರಾಂತಿ ಈ ಬಾರಿ ಜನವರಿ 14 ಮತ್ತು 15 ಎರಡೂ ದಿನ ಬಂದಿದೆ. ಹಾಗಾಗಿ ಜನರು ಮಕರ ಸಂಕ್ರಾಂತಿಯನ್ನು ಜನವರಿ 14 ಮತ್ತು 15 ಎರಡರಲ್ಲಿ ಒಂದು ದಿನ ಆಚರಿಸ್ತಿದ್ದಾರೆ. ಮಕರ ಸಂಕ್ರಾಂತಿ ದಿನ ಸೂರ್ಯ ತನ್ನ ರಾಶಿ ಬದಲಿಸುತ್ತಾನೆ. ಈ ದಿನ ಮಕರ ರಾಶಿಗೆ ಸೂರ್ಯ ಪ್ರವೇಶ ಮಾಡ್ತಾನೆ. ಹಾಗಾಗಿಯೇ ಈ ದಿನವನ್ನು ಮಕರ ಸಂಕ್ರಾಂತಿ ಎನ್ನಲಾಗುತ್ತದೆ. ಈ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಎಳ್ಳು-ಬೆಲ್ಲದ ಜೊತೆ ಹಬ್ಬ ಮಾಡುವ ಸಂಪ್ರದಾಯವಿದೆ.
ಸಂಕ್ರಾಂತಿ ದಿನದಂದು ಗಂಗೆ ಸ್ನಾನಕ್ಕೆ ಹೆಚ್ಚಿನ ಮಹತ್ವವಿದೆ. ಈ ದಿನ ದಾನಕ್ಕೂ ಮಹತ್ವವಿದೆ. ಸಂಕ್ರಾಂತಿ ದಿನ ಕೆಲ ಕೆಲಸಗಳನ್ನು ಮಾಡಬಾರದು. ಹಾಗೆ ಮತ್ತೆ ಕೆಲ ಕೆಲಸಗಳನ್ನು ಅವಶ್ಯಕವಾಗಿ ಮಾಡಬೇಕು. ಸಂಕ್ರಾಂತಿ ದಿನ ಸ್ನಾನ, ಪೂಜೆಯಿಲ್ಲದೆ ಆಹಾರ ಸೇವನೆ ಮಾಡಬಾರದು. ಹಾಗೆಯೇ ಯಾವುದೇ ಮಸಾಲೆಯುಕ್ತ ಆಹಾರ ಸೇವನೆ ಮಾಡಬಾರದು. ಈರುಳ್ಳಿ, ಬೆಳ್ಳುಳ್ಳಿಯಿಂದ ದೂರವಿಬೇಕು. ಮದ್ಯಪಾನ, ಧೂಮಪಾನ ಮಾಡಬಾರದು.
ಮಕರ ಸಂಕ್ರಾಂತಿಯ ದಿನದಂದು ಕಪ್ಪು ಎಳ್ಳನ್ನು ದಾನ ಮಾಡುವುದು ಒಳ್ಳೆಯದು. ಹೀಗೆ ಮಾಡುವುದರಿಂದ ಸೂರ್ಯ ಮತ್ತು ಶನಿ ಸಂತುಷ್ಟರಾಗುತ್ತಾರೆಂದು ನಂಬಲಾಗಿದೆ.
ಈ ದಿನ ಕಪ್ಪು ಎಳ್ಳಿನಿಂದ ಮಾಡಿದ ಲಡ್ಡು ತಿನ್ನುವುದು ಬಹಳ ಒಳ್ಳೆಯದು. ಗಂಗೆಯಲ್ಲಿ ಸ್ನಾನ ಸಾಧ್ಯವಿಲ್ಲ ಎನ್ನುವವರು, ಗಂಗೆ ನೀರನ್ನು ಸ್ನಾನದ ನೀರಿಗೆ ಬೆರೆಸಬೇಕು. ಇಲ್ಲವೇ ಪವಿತ್ರ ನದಿಯಲ್ಲಿ ಸ್ನಾನ ಮಾಡಬೇಕು.
ಮಕರ ಸಂಕ್ರಾಂತಿಯ ದಿನದಂದು ಖಿಚಡಿ ತಿನ್ನುವುದರಿಂದ ವಿಶೇಷ ಪ್ರಯೋಜನಗಳಿವೆ. ಈ ಸಂಪ್ರದಾಯವು ಶತಮಾನಗಳಿಂದ ನಡೆದುಕೊಂಡು ಬಂದಿದೆ.
ಮಕರ ಸಂಕ್ರಾಂತಿಯ ದಿನದಂದು ಗ್ರಹಗಳ ಶಾಂತಿಗಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಗ್ರಹಗಳ ಪ್ರಕಾರ ದಾನ ಮಾಡುವುದರಿಂದ ಗ್ರಹ ದೋಷ ನಿವಾರಣೆಯಾಗುತ್ತದೆ.
ಈ ದಿನ ಮನೆಗೆ ಬಂದ ಭಿಕ್ಷುಕರನ್ನು ಎಂದಿಗೂ ಬರಿಗೈನಲ್ಲಿ ಕಳುಹಿಸಬಾರದು. ಇದು ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ.