ಬೆಂಗಳೂರು: ಇನ್ನೇನು ಹಳೆ ವರ್ಷ ಕಳೆದು ಹೊಸ ವರ್ಷ ಬಂದೇಬಿಟ್ಟಿದೆ. ಅದರ ಬೆನ್ನಲ್ಲೇ ಮಕರ ಸಂಕ್ರಮಣ ಅಥವಾ ಸಂಕ್ರಾಂತಿ ಹಬ್ಬವೂ ಆಗಮಿಸಿದೆ. ಪ್ರತಿಬಾರಿಯಂತೆ ಈಬಾರಿಯೂ ಮಕರ ಸಂಕ್ರಾಂತಿ ಹಬ್ಬ ಯಾವಾಗ? ಜನವರಿ 14ರಂದಾ? ಅಥವಾ ಜನವರಿ 15ರಂದು ಆಚರಿಸುವುದಾ? ಎಂಬ ಗೊಂದಲ ಎಲ್ಲರಲ್ಲಿಯೂ ಮನೆ ಮಾಡಿರುತ್ತದೆ. ಈ ಗೊಂದಲಗಳಿಗೆ ಪರಿಹಾರವಾಗಿ ಇಲ್ಲಿದೆ ಮಾಹಿತಿ.
ಈ ವರ್ಷ 2025ರ ಮಕರ ಸಂಕ್ರಾಂತಿ ಹಬ್ಬದ ದಿನಾಂಕದ ಯಾವುದೇ ಗೊಂದಲ ಬೇಡ. ಮಕರ ಸಂಕ್ರಾಂತಿ ಎಂದರೆ ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಚಲಿಸುವುದು. ಈ ದಿನ ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣವನ್ನು ಪ್ರವೇಶಿಸುತ್ತಾನೆ. ಹಿಂದೂ ಧರ್ಮದಲ್ಲಿ ಈ ದಿನ ಅತ್ಯಂತ ಮಹತ್ವವಾದ ಪವಿತ್ರವಾದ ದಿನವಾಗಿದ್ದು ವಿಶೇಷವಾಗಿ ಆಚರಣೆ ಮಡಲಾಗುತ್ತದೆ.
ಮಕರ ಸಂಕ್ರಾಂತಿಯಂದು ಪವಿತ್ರ ನದಿಗಳಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆಯುವುದು ದಾನ ಮಾಡುವುದು, ಎಳ್ಳು-ಬೆಲ್ಲ ಹಂಚಿ ಸ್ಂಭ್ರಮಿಸುವುದು ಅತ್ಯಂತ ಮಹತ್ವದ ಆಚರಣೆ. ಹಾಗಾದರೆ ಈಬಾರಿಯ ಮಕರ ಸಂಕ್ರಾಂತಿ ಯಾವಾಗ? ಈ ಬಗ್ಗೆ ಜ್ಯೋತಿಷಿಗಳು ಹೇಳುವುದೇನು? ಇಲ್ಲಿದೆ ಮಾಹಿತಿ.
2025ರ ಮಕರ ಸಂಕ್ರಾಂತಿಯು ಜನವರಿ 14 ರಂದು ಮಧ್ಯಾಹ್ನ 3:27 ಕ್ಕೆ ಆರಂಭವಾಗುತ್ತದೆ. ಸೂರ್ಯನ ಮಕರ ರಾಶಿಯನ್ನು ಪ್ರವೇಶುತ್ತಾನೆ. ಅಂದು ಸಂಜೆ 6:05 ರವರೆಗೆ ಶುಭ ಮುಹೂರ್ತವಿರಲಿದೆ. ಹಾಗಾಗಿ ಜನವರಿ 14 ರಂದು ಮಕರ ಸಂಕ್ರಾಂತಿ!
ಜನವರಿ 14, 2025 ರಂದು ಮಕರ ಸಂಕ್ರಮಣ ಆಚರಿಸಲಾಗುತ್ತದೆ. ಬ್ರಹ್ಮ ಮುಹೂರ್ತದಲ್ಲಿ ಭಕ್ತರು ಗಂಗಾ, ಗೋದಾವರಿ ಮುಂತಾದ ಪವಿತ್ರ ನದಿಗಳಲ್ಲಿ ಈ ದಿನದಂದು ಸ್ನಾನ ಮಾಡಬಹುದು. ಸಂಜೆ 4 ರಿಂದ 5:15 ರವರೆಗೆ ಮಂಗಳಕರ ಸಮಯ.
ಈ ದಿನದಂದು ಗಂಗಾ ಅಥವಾ ಇತರ ಪವಿತ್ರ ನದಿಯಲ್ಲಿ ಸ್ನಾನ ಮಾಡಿದ ನಂತರ ಬೆಲ್ಲ ಮತ್ತು ಎಳ್ಳನ್ನು ದಾನ ಮಾಡಬೇಕು ಎಂದು ಜ್ಯೋತಿಷಿಗಳು ಹೇಳುತ್ತಾರೆ.