ಕೊರೊನಾ ಅನೇಕ ಬದಲಾವಣೆಗಳನ್ನು ಮಾಡಿದೆ. ಆರೋಗ್ಯದ ಮೇಲೆ ಕೊರೊನಾ ಪರಿಣಾಮ ಹೆಚ್ಚಿದೆ. ಕೊರೊನಾದಿಂದಾಗಿ ದೈಹಿಕ ಹಾಗೂ ಮಾನಸಿಕ ಸಮಸ್ಯೆ ಕಾಡುತ್ತಿದೆ. ಕೊರೊನಾ, ಸೆಕ್ಸ್ ಆಸಕ್ತಿ ಮೇಲೂ ಪರಿಣಾಮ ಬೀರಿದೆ. ಒಬ್ಬಂಟಿಯಾಗಿರುವ ಪುರುಷರ ಸೆಕ್ಸ್ ಆಸಕ್ತಿ, ಕೊರೊನಾ ನಂತ್ರ ಕಡಿಮೆಯಾಗಿದೆ.
ಸಂಭೋಗದ ಆಸೆ ಬಹಳ ಕಡಿಮೆಯಾಗಿದೆ ಎಂಬುದು ಅಧ್ಯಯನದಿಂದ ಹೊರಬಿದ್ದಿದೆ. ಈ ಅಧ್ಯಯನದಲ್ಲಿ ಭಾಗವಹಿಸಿದ್ದ ಶೇಕಡಾ 81ರಷ್ಟು ಒಂಟಿ ಪುರುಷರು, ಸೆಕ್ಸ್ ಆಸಕ್ತಿ ಕಡಿಮೆಯಾಗಿದೆ ಎಂದಿದ್ದಾರೆ. ಇದಕ್ಕೆ ಮುಖ್ಯ ಕಾರಣ ಕೊರೊನಾ ಎಂದು ವಿಜ್ಞಾನಿ ಜಸ್ಟಿನ್ ಗಾರ್ಸಿಯಾ ಹೇಳಿದ್ದಾರೆ.
ಕೊರೊನಾ ಒತ್ತಡ ಹೆಚ್ಚು ಮಾಡಿದೆ. ಈ ಒತ್ತಡ, ಟೆಸ್ಟೋಸ್ಟೆರಾನ್ ಮಟ್ಟವನ್ನು ಕಡಿಮೆ ಮಾಡಿದೆ. ಡೋಪಮೈನ್ ಮಟ್ಟವು ತುಂಬಾ ಕಡಿಮೆಯಾಗಿದೆ. ಇದರಿಂದಾಗಿ ಒತ್ತಡ, ಖಿನ್ನತೆ ಮತ್ತು ಆತಂಕಕ್ಕೆ ಒಳಗಾಗ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಇದ್ರಿಂದ ಜನರು ಲೈಂಗಿಕತೆಗೆ ಮೊದಲಿನಂತೆ ಪ್ರಾಮುಖ್ಯತೆ ನೀಡ್ತಿಲ್ಲ. ಸಂಬಂಧ ಬೆಳೆಸುವ ಅವಕಾಶ ಸಿಕ್ಕಷ್ಟೂ ಆಸೆ ಹೆಚ್ಚುತ್ತದೆ ಎಂದು ಗ್ರೇಸಿಯಾ ಹೇಳಿದ್ದಾರೆ. ಸಂಬಂಧ ಬೆಳೆಸುವುದು ಕಡಿಮೆಯಾಗ್ತಿದ್ದಂತೆ ಆಸಕ್ತಿ ಕಡಿಮೆಯಾಗುತ್ತದೆ. ಹಾಗಂತ ಸಂಪೂರ್ಣ ಆಸಕ್ತಿಯೇ ಇಲ್ಲವೆಂದಲ್ಲ. ಮೊದಲಿನಷ್ಟಿಲ್ಲ. ಪರಿಸ್ಥಿತಿಗೆ ಹೊಂದಿಕೊಂಡಿರುವ ಅವರು, ಇತರೇ ವಿಷ್ಯಕ್ಕೆ ಆದ್ಯತೆ ನೀಡ್ತಿದ್ದಾರೆ ಎಂದು ಗ್ರೇಸಿಯಾ ಹೇಳಿದ್ದಾರೆ.
ಕೋವಿಡ್ ನಂತರ, ಒಂಟಿ ಪುರುಷರು ಲೈಂಗಿಕತೆಗಿಂತ ಸಂಬಂಧಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಪ್ರಾರಂಭಿಸಿದ್ದಾರೆ. ಕೇವಲ ಶೇಕಡಾ 11ರಷ್ಟು ಒಬ್ಬಂಟಿ ಪುರುಷರು ಸಾಂದರ್ಭಿಕ ಲೈಂಗಿಕತೆಯನ್ನು ಬಯಸುತ್ತಿದ್ದಾರೆ. ಹೆಚ್ಚಿನ ಪುರುಷರು ಭಾವನಾತ್ಮಕ ಸಂಬಂಧಕ್ಕೆ ಆದ್ಯತೆ ನೀಡುತ್ತಿದ್ದಾರೆ.