ಗ್ಲಾಸ್ಗೋ: ಯುಎನ್ ಹವಾಮಾನ ಬದಲಾವಣೆ ಸಮ್ಮೇಳನ COP 26 ನಲ್ಲಿ ಅಂತರರಾಷ್ಟ್ರೀಯ ರಾಜತಾಂತ್ರಿಕತೆಯಲ್ಲಿ ಭಾರತಕ್ಕೆ ಪ್ರಮುಖ ಗೆಲುವು ಸಿಕ್ಕಿದೆ. ಸಮ್ಮೇಳನದಲ್ಲಿ ಸುದೀರ್ಘ ಮಾತುಕತೆಗಳ ನಂತರ ಭಾರತ ‘ಪೇಸ್ ಔಟ್’ ಬದಲಿಗೆ ‘ಪೇಸ್ ಡೌನ್’ಗೆ ಕಲ್ಲಿದ್ದಲನ್ನು ಸೇರಿಸಲು ಜಗತ್ತಿನ ರಾಷ್ಟ್ರಗಳ ಮನವೊಲಿಸುವಲ್ಲಿ ಯಶಸ್ವಿಯಾಗಿದೆ.
ಸುಮಾರು 200 ರಾಷ್ಟ್ರಗಳು ಅಂಗೀಕರಿಸಿದ COP26 ಕರಡನ್ನು ಭಾರತವು ಅಂತಿಮವಾಗಿ ಬೆಂಬಲಿಸಿದೆ. US ಹವಾಮಾನ ಮುಖ್ಯಸ್ಥ ಜಾನ್ ಕೆರ್ರಿ ಅವರು ಗ್ಲ್ಯಾಸ್ಗೋ ಒಪ್ಪಂದವನ್ನು ಸಮರ್ಥಿಸಿಕೊಂಡರು, ಇದು ಹವಾಮಾನ ಬದಲಾವಣೆಗೆ ಅಂತಿಮ ಗೆರೆಯೇನಲ್ಲ, ನಮಗೆ ಬೇಕಾಗಿರುವುದು ಮಾಲಿನ್ಯ ಮುಕ್ತವಾಗಿ ಬದುಕುವುದಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾ, ಇರಾನ್ ಮತ್ತು ನೈಜೀರಿಯಾದಿಂದ ಇಂಧನ ಸಬ್ಸಿಡಿಗಳ ಮೇಲೆ ಬೆಂಬಲ ವ್ಯಕ್ತವಾಗಿದೆ. ಭಾರತ ಮತ್ತು ಚೀನಾದಿಂದ ಕಡಿಮೆಯಾಗದ ಕಲ್ಲಿದ್ದಲು ಶಕ್ತಿ ಮತ್ತು ಅಸಮರ್ಥ ಪಳೆಯುಳಿಕೆ ಇಂಧನದ ವೇಗವರ್ಧಿತ ಹಂತವನ್ನು ಸೇರಿಸುವುದಕ್ಕೆ ಬಲವಾದ ವಿರೋಧ ಕೇಳಿ ಬಂದಿದೆ.
ಆದಾಗ್ಯೂ, ಆಸ್ಟ್ರೇಲಿಯಾ, ಯುಎಸ್, ಟರ್ಕಿ, ಕೊಲಂಬಿಯಾ, ಇಂಡೋನೇಷ್ಯಾ ಮತ್ತು ಜಪಾನ್ ತಮ್ಮ ಹಿಂದಿನ ನಿಲುವಿನಿಂದ ಗಮನಾರ್ಹ ಬದಲಾವಣೆ ಸೂಚಿಸಿದ್ದು, ಬೆಂಬಲ ಪ್ರೋತ್ಸಾಹದಾಯಕವಾಗಿದೆ. ಇದು ಕಲ್ಲಿದ್ದಲಿನ ಮೇಲಿನ ಹಣಕಾಸು ಮತ್ತು ತಂತ್ರಜ್ಞಾನ ವರ್ಗಾವಣೆಯಲ್ಲಿನ ಅಂತರ ಸೂಚಿಸುತ್ತದೆ, ಅಭಿವೃದ್ಧಿ ಹೊಂದಿದ ದೇಶಗಳು ಇದರ ಬಗ್ಗೆ ಗಮನಹರಿಸಬೇಕಾಗುತ್ತದೆ ಎಂದು ಹೇಳಲಾಗಿದೆ.
COP26 ಗ್ಲ್ಯಾಸ್ಗೋದಲ್ಲಿ 1.5C ಅನ್ನು ಜೀವಂತವಾಗಿಡಲು ಮತ್ತು ಪ್ಯಾರಿಸ್ ಒಪ್ಪಂದದ ಪ್ರಮುಖ ಅಂಶಗಳನ್ನು ಅಂತಿಮಗೊಳಿಸಲು ಸುಮಾರು 200 ದೇಶಗಳು ಗ್ಲ್ಯಾಸ್ಗೋ ಹವಾಮಾನ ಒಪ್ಪಂದವನ್ನು ಒಪ್ಪಿಕೊಂಡಿವೆ. ಹವಾಮಾನ ಸಮಾಲೋಚಕರು ಹವಾಮಾನ ಕ್ರಿಯೆಯನ್ನು ತುರ್ತಾಗಿ ವೇಗಗೊಳಿಸುವ ಒಮ್ಮತದೊಂದಿಗೆ ಎರಡು ವಾರಗಳ ಮಾತುಕತೆ ಕೊನೆಗೊಳಿಸಿದ್ದಾರೆ.
ಗ್ಲ್ಯಾಸ್ಗೋ ಹವಾಮಾನ ಒಪ್ಪಂದ ಮಹತ್ವಾಕಾಂಕ್ಷೆ ಹೆಚ್ಚಿಸಿದ್ದು, ಸಂಘಟಿತ ಮತ್ತು ತಕ್ಷಣದ ಜಾಗತಿಕ ಪ್ರಯತ್ನಗಳನ್ನೊಳಗೊಂಡಿದೆ. ಗ್ಲ್ಯಾಸ್ಗೋ ಹವಾಮಾನ ಒಪ್ಪಂದವು ಹವಾಮಾನ ಕ್ರಿಯೆಯ ವೇಗವನ್ನು ಹೆಚ್ಚಿಸುತ್ತದೆ. ಎಲ್ಲಾ ದೇಶಗಳು ತಮ್ಮ ಪ್ರಸ್ತುತ ಹೊರಸೂಸುವಿಕೆಯ ಗುರಿಗಳನ್ನು 2030 ಕ್ಕೆ ಮರುಪರಿಶೀಲಿಸಲು ಮತ್ತು ಬಲಪಡಿಸಲು ಒಪ್ಪಿಕೊಂಡಿದ್ದು, ಇದನ್ನು ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆ ಎಂದು ಕರೆಯಲಾಗುತ್ತದೆ.