BIGಬೆಂಗಳೂರು : ಬಿಬಿಎಂಪಿಯಲ್ಲಿ ‘ಮೇಜರ್ ಸರ್ಜರಿ’ ನಡೆದಿದ್ದು, ಬಿಬಿಎಂಪಿ ಅಧಿಕಾರಿಗಳ ವರ್ಗಾವಣೆಗೊಳಿಸಿ ಡಿಸಿಎಂ ಡಿಕೆ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.
ಕರಿಗೌಡ, ಕಂದಾಯ ಪರಿವೀಕ್ಷಕ, ಬೊಮ್ಮನಹಳ್ಳಿ ವಲಯದಿಂದ ಆರ್ ಆರ್ ನಗರದ 160 ವಾರ್ಡ್ ಗೆ ವರ್ಗಾವಣೆ ಮಾಡಲಾಗಿದೆ. ಕೆ ಶಿವಲಿಂಗಯ್ಯ , ಹಿರಿಯ ಆರೋಗ್ಯಾಧಿಕಾರಿ ಇವರನ್ನು ದಕ್ಷಿಣ ವಲಯದಿಂದ ಆರ್ ಆರ್ ನಗರದ ಜ್ಞಾನಭಾರತಿಗೆ ವರ್ಗಾವಣೆ ಮಾಡಲಾಗಿದೆ. ಮಾರುತಿ ಪಿಸೆಟ್ ಹಿರಿಯ ಆರೋಗ್ಯ ಪರಿವೀಕ್ಷಕ ಇವರನ್ನು ದಕ್ಷಿಣ ವಲಯದಿಂದ ಆರ್ ಆರ್ ನಗರದ ಜ್ಞಾನಭಾರತಿಗೆ ವರ್ಗಾವಣೆ ಮಾಡಲಾಗಿದೆ.
ಹನುಮಂತರಾಯಪ್ಪ , ಕಂದಾಯ ಪರಿವೀಕ್ಷಕ ಶ್ರೀರಾಮ ಉಪವಲಯ ಕಚೇರಿಯಿಂದ ಕೆಂಗೇರಿ ಉಪವಲಯ ಕಂದಾಯ ಕಚೇರಿಗೆ ವರ್ಗಾವಣೆ ಮಾಡಲಾಗಿದೆ. ಎಸ್ ವಿಶ್ವನಾಥ್ ಕಂದಾಯ ಪರಿವೀಕ್ಷಕ ಇವರನ್ನು ಪಶ್ಚಿಮ ವಲಯದಿಂದ ಆರ್ ಆರ್ ನಗರದ ಉಪವಿಭಾಗ ಕಚೇರಿಗೆ ವರ್ಗಾವಣೆ ಮಾಡಲಾಗಿದೆ. ರಮೇಶ್ ಹಿರಿಯ ಆರೋಗ್ಯ ಪರಿವೀಕ್ಷಕ , ಆರ್ ಆರ್ ನಗರ ವಲಯದಲ್ಲಿ ಸದ್ಯಕ್ಕೆ ಜಾಗದಿಂದ ಅದೇ ವಲಯದ ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ. ಡಿಎಲ್ ನಾರಾಯಣ್ ಹಿರಿಯ ಆರೋಗ್ಯ ಪರಿವೀಕ್ಷಕ ಹಾಗೂ ಮಂಜುನಾಥ್, ಹಿರಿಯ ಆರೋಗ್ಯ ಪರಿವೀಕ್ಷಕ ಇವರನ್ನು ಆರ್ ಆರ್ ನಗರ ವಲಯದ ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ. ಕುಮಾರ್, ಕಂದಾಯ ಪರಿವೀಕ್ಷಕ . ಹೇರೋಹಳ್ಳಿ ಉಪವಲಯದಿಂದ ಆರ್ ಆರ್ ನಗರದ ಜ್ಞಾನಭಾರತಿಗೆ ವರ್ಗಾವಣೆ ಮಾಡಲಾಗಿದೆ.