alex Certify ರಾಜ್ಯ ಸರ್ಕಾರದಿಂದ ಮಹತ್ವದ ಕ್ರಮ : ʻಅಭಿಯಾನದ ಮಾದರಿಯಲ್ಲಿ ʻಆರ್ ಟಿಸಿ-ಆಧಾರ್ ಜೋಡಣೆʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯ ಸರ್ಕಾರದಿಂದ ಮಹತ್ವದ ಕ್ರಮ : ʻಅಭಿಯಾನದ ಮಾದರಿಯಲ್ಲಿ ʻಆರ್ ಟಿಸಿ-ಆಧಾರ್ ಜೋಡಣೆʼ

ಬೆಂಗಳೂರು : ಗ್ರಾಮ ಲೆಕ್ಕಿಗರ ಮನೆ ಬಾಗಿಲಿಗೆ ತೆರಳಿ ಆರ್‌ಟಿಸಿ-ಆಧಾರ್‌ ಜೋಡಣೆ ಕೆಲಸದಲ್ಲಿ ತೊಡಗಿದ್ದಾರೆ. 88 ಸಾವಿರ ಆರ್‌ಟಿಸಿಗಳಲ್ಲಿ ಕೃಷಿ ಭೂಮಿ ಇರುವುದು ಕಂಡುಬಂದಿದೆ. ಆಧಾರ್‌ ಲಿಂಕ್‌ ಮಾಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.  

ಈ ಕುರಿತು ಮಾಹಿತಿ ನೀಡಿರುವ ಸಚಿವರು, ಬಾಕಿ ಪೋಡಿ ಹಾಗೂ ದುರಸ್ತಿ ಪ್ರಕರಣ ಇತ್ಯರ್ಥಕ್ಕೆ ಮೊದಲು ನಿಖರವಾದ ಆಕಾರ್‌ ಬಂದ್‌ ಮಾಹಿತಿ ಪಡೆಯಬೇಕು. ನಿಖರವಾದ ಆಕಾರ್‌ ಬಂದ್‌ ಇಲ್ಲದೇ ಆರ್‌ಟಿಸಿ ಜೊತೆಗೆ ಜೋಡಣೆ ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳಿಗೆ ಮುಂದಿನ 2 ತಿಂಗಳಲ್ಲಿ 65 ಲಕ್ಷ ಆಕಾರ್‌ ಬಂದ್‌ ಡಿಜಿಟಲೀಕರಣಗೊಳಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯಾದ್ಯಂತ ಆರ್‌ ಟಿಸಿ-ಆಧಾರ್‌ ಜೋಡಣೆ ಕೆಲಸ  ಅಭಿಯಾನದ ಮಾದರಿಯಲ್ಲಿ ನಡೆಯುತ್ತಿದ್ದು, ಈವರೆಗೆ ೧೫ ಲಕ್ಷ ಆರ್‌ ಟಿಸಿ ಮಾಲೀಕರನ್ನು ಸಂಪರ್ಕಿಸಲಾಗಿದೆ. ಮುಂದಿನ ಎರಡು-ಮೂರು ತಿಂಗಳಲ್ಲಿ ಎಲ್ಲ ಆರ್‌ ಟಿಸಿ ಮಾಲೀಕರನ್ನು ತಲುಪಲು ರೂಪುರೇಷೆ ಸಿದ್ದಪಡಿಸಲಾಗಿದೆ ಎಂದು ಹೇಳಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...