ಚಿತ್ರದುರ್ಗ ಜಿಲ್ಲಾ ಕೇಂದ್ರದಿಂದ ಶಿವಮೊಗ್ಗಕ್ಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿದರೆ, ಹೊಳಲ್ಕೆರೆ ಸಿಗುತ್ತದೆ.
ಹೊಳಲ್ಕೆರೆ ತಾಲ್ಲೂಕು ಕೇಂದ್ರವಾಗಿದ್ದು, ಬಸ್ ಹಾಗೂ ರೈಲಿನ ಸಂಪರ್ಕವಿದೆ. ಇಲ್ಲಿನ ಗಣಪತಿ ದೇವಾಲಯ ನೋಡಬಹುದಾದ ಪ್ರಮುಖ ಸ್ಥಳವಾಗಿದೆ. ಹೆಚ್ಚಿನ ಸಂಖ್ಯೆಯ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.
ಹೊಳಲ್ಕೆರೆಯಿಂದ ಸ್ವಲ್ಪ ದೂರದಲ್ಲಿ ಮಲ್ಲಾಡಿಹಳ್ಳಿ ಇದೆ. ದಿ. ರಾಘವೇಂದ್ರ ಗುರೂಜಿಯವರು ಸ್ಥಾಪಿಸಿದ ಸೇವಾಶ್ರಮ, ಯೋಗ ಮತ್ತು ಆರೋಗ್ಯ ಕೇಂದ್ರಕ್ಕೆ ವಿವಿಧ ಕಡೆಗಳಿಂದ ಜನ ಬರುತ್ತಾರೆ.
ಇನ್ನು ಚಿತ್ರದುರ್ಗ ರಸ್ತೆಯಲ್ಲಿ ಚಿತ್ರಹಳ್ಳಿ ಇದೆ. ಹೊರಕೆರೆ ದೇವರಪುರದಲ್ಲಿ ಶ್ರೀ ರಂಗನಾಥ ಸ್ವಾಮಿ ದೇವಾಲಯವಿದೆ.
ಹೊಳಲ್ಕೆರೆ ತಾಲ್ಲೂಕಿನಲ್ಲಿರುವ ತಾಳ್ಯ ಕೂಡ ಪ್ರಮುಖ ಸ್ಥಳ. ಇಲ್ಲಿ ಶಿಲಾಯುಗದ ಮಾನವರು ನೆಲೆಸಿದ್ದರು ಎನ್ನಲಾಗಿದೆ. ಆಂಜನೇಯಸ್ವಾಮಿ ದೇವಾಲಯ ಇಲ್ಲಿದ್ದು, ಇಲ್ಲಿರುವ ಶ್ರೀರಾಮನ ಬಾಣಗಳನ್ನು ನೋಡಬಹುದಾಗಿದೆ.
ಹೊಳಲ್ಕೆರೆ ತಾಲ್ಲೂಕಿನಲ್ಲಿ ಇನ್ನೂ ಹಲವಾರು ನೋಡಬಹುದಾದ ಸ್ಥಳಗಳಿದ್ದು, ಮೊದಲೇ ಮಾಹಿತಿ ಪಡೆದುಕೊಂಡು ಹೋದರೆ ಅನುಕೂಲವಾಗುತ್ತದೆ.