ಬೆಂಗಳೂರು : ರಾಜ್ಯ ಸರ್ಕಾರವು 2023-24 ನೇ ಸಾಲಿಗೆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಕುಡಿಯುವ ನೀರು ಮತ್ತು ಶೌಚಾಲಯಗಳ ವಾರ್ಷಿಕ ನಿರ್ವಹಣೆಗಾಗಿ 2ನೇ ಕಂತಿನ ಅನುದಾನ ಬಿಡುಗಡೆ ಮಾಡಿದೆ.
2023-24 ನೇ ಸಾಲಿನ ಆಯವ್ಯಯದಲ್ಲಿ ಘೋಷಿತವಾದಂತೆ ಕುಡಿಯುವ ನೀರು ಮತ್ತು ಶೌಚಾಲಯ ನಿರ್ವಹಣೆಗಾಗಿ ಮತ್ತು ಶಾಲೆಯ ಇತರೇ ನಿರ್ವಹಣೆಗೆ ಖರ್ಚು ಭರಿಸಲು ಉಲ್ಲೇಖ(1)ರನ್ವಯ ಅನುದಾನ ರೂ 4352.47 ಲಕ್ಷಗಳನ್ನು ಜಿಲ್ಲಾವಾರು ಮತ್ತು ತಾಲ್ಲೂಕುವಾರು ಅನುದಾನ ಹಂಚಿಕೆ ಮಾಡಿ ರಾಜ್ಯದ ಎಲ್ಲಾ ಉಪನಿರ್ದೇಶಕರು (ಆ) ರವರುಗಳಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಬಿಡುಗಡೆ ಮಾಡಲಾಗಿದೆ.
ಮುಂದುವರೆದು ಉಲ್ಲೇಖ(4)ರ ಸರ್ಕಾರದ ಆದೇಶದನ್ವಯ ಅನುದಾನ ಬಿಡುಗಡೆಯಾಗಿರುವುದನ್ನು ಈ ಕೆಳಕಂಡಂತೆ ಉಪನಿರ್ದೇಶಕರು (ಆ) ರವರುಗಳಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಂಚಿಕೆ ಮಾಡಿ ಬಿಡುಗಡೆ ಮಾಡಲಾಗಿದೆ.
ಅನುದಾನ ಲಭ್ಯತೆ ಆಧರಿಸಿ ಅನುಬಂಧಗಳಂತೆ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಇನ್ನುಳಿಕೆ ಬಿಡುಗಡೆ ಮಾಡಬೇಕಾಗಿರುವ ಅನುದಾನವನ್ನು ಸರ್ಕಾರದಿಂದ ಅನುದಾನ ಬಿಡುಗಡೆಯಾದ ಕೂಡಲೇ ಉಪನಿರ್ದೇಶಕರು (ಆ) ರವರುಗಳಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಬಿಡುಗಡೆಗೆ ಕ್ರಮವಹಿಸಲಾಗುವುದು.
ಈ ಕೆಳಕಂಡ ಸೂಚನೆಗಳಂತೆ ಅನುದಾನ ಬಳಸಿಕೊಂಡು ಕೂಡಲೇ ಖರ್ಚು ಭರಿಸಲು ಸೂಚಿಸಿದೆ.
- ಅನುದಾನವನ್ನು ಪ್ರಥಮ ಆದ್ಯತೆಯ ಮೇರೆಗೆ ಶೌಚಾಲಯ ನಿರ್ವಹಣೆಗೆ ಬಳಸಿಕೊಳ್ಳುವುದು. ನೈರ್ಮಲ್ಯಕ್ಕೆ ಪ್ರಥಮ ಆದ್ಯತೆ ನೀಡುವುದು ನಂತರ ಉಳಿಕೆ ಅನುದಾನವನ್ನು ಇನ್ನಿತರೆ ವೆಚ್ಚಗಳಿಗೆ ಭರಿಸಲು ಕ್ರಮವಹಿಸುವುದು.
- ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ಸ್ವಚ್ಛತಾ ಕಾರ್ಯಕ್ಕೆ ವಿದ್ಯಾರ್ಥಿಗಳನ್ನು ಬಳಸಿಕೊಂಡಿರುವ ಕೆಲವು ಪ್ರಕರಣಗಳು ಬೆಳಕಿಗೆ ಬಂದಿದ್ದು, ಕಡ್ಡಾಯವಾಗಿ ವಿದ್ಯಾರ್ಥಿಗಳನ್ನು ಇಂತಹ ಕಾರ್ಯಗಳಿಗೆ ಬಳಸದೇ ಇರುವಂತೆ ಸೂಚಿಸಿದೆ. ಈ ಸಂಬಂಧಿಸಿದಂತೆ ಉಲ್ಲೇಖ (2) ರ ಸುತ್ತೋಲೆಯಲ್ಲಿ ಸೂಚಿಸಿರುವ ಎಲ್ಲಾ ಅಂಶಗಳನ್ನು ಕಡ್ಡಾಯವಾಗಿ ಪಾಲಿಸಲು ತಿಳಿಸಿದೆ ಮತ್ತು ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರವಹಿಸಲು ಸೂಚಿಸಿದೆ.
- ಅನುಬಂಧಗಳಲ್ಲಿ ಅನುದಾನ ಬಿಡುಗಡೆ ಮಾಡಿದ ಘಟಕ ವೆಚ್ಚದ ಪ್ರಮಾಣವನ್ನು ನಮೂದಿಸಲಾಗಿದ್ದು ಅದರಂತೆ ಶೇಕಡ ಪ್ರಮಾಣದಲ್ಲಿ ಶಾಲೆಗಳಿಗೆ ಅನುದಾನ ಬಿಡುಗಡೆ ಮಾಡಲು ಕ್ರಮವಹಿಸುವುದು.
- ಎಸ್.ಸಿ.ಪಿ/ಟಿ.ಎಸ್.ಪಿ ಲೆಕ್ಕ ಶೀರ್ಷಿಕೆಗಳಲ್ಲಿ ಬರುವ ಅನುದಾನವನ್ನು ನಿಯಮಾನುಸಾರ ಎಚ್ಚರದಿಂದ ನೀಡಲಾದ ಅನುಬಂಧಗಳಂತೆ ಅನುದಾನ ವಿನಿಯೋಗಿಸುವುದು.
- ಸಂಬಂಧಪಟ್ಟ ಜಿಲ್ಲಾ ಉಪನಿರ್ದೇಶಕರು(ಆಡಳಿತ) ರವರು ನಿರಂತರವಾಗಿ ಅನುಪಾಲನೆಯಲ್ಲಿದ್ದು ಅನುದಾನ ಸೆಳೆಯಲು ಅಗತ್ಯ ಕ್ರಮಕೈಗೊಳ್ಳುವುದು.
- ಈ ಸಂಬಂಧ ಎಲ್ಲಾ ಸಂಬಂಧಪಟ್ಟ ಉಪನಿರ್ದೇಶಕರು(ಆಡಳಿತ) ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಸರ್ಕಾರಿ ಶಾಲೆಗಳಿಗೆ ಅನುದಾನ ಬಳಸಿಕೊಂಡ ಬಗ್ಗೆ ಖಚಿತಪಡಿಸಿಕೊಳ್ಳುವುದು ಮುಖ್ಯೋಪಾಧ್ಯಾಯರುಗಳಿಗೆ ಕಡ್ಡಾಯವಾಗಿ ಈ ಜ್ಞಾಪನದ ಪ್ರತಿಯನ್ನು ತಲುಪಿಸುವ ವ್ಯವಸ್ಥೆ ಮಾಡತಕ್ಕದ್ದು.
- ಈ ಜ್ಞಾಪನವನ್ನು schooleducation.karnataka.gov.in wwg gian ಶಾಲಾ ಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಉಪನಿರ್ದೇಶಕರುಗಳು ಜ್ಞಾಪನವನ್ನು ವೆಬ್ ಸೈಟ್ ಮೂಲಕವೂ ಪಡೆಯಬಹುದಾಗಿದೆ.
- ನಿಗದಿತ ದಿನಾಂಕದೊಳಗೆ ಅನುದಾನ ಸೆಳೆಯಲು ಸಾಧ್ಯವಾಗದೆ ಅನುದಾನ ವೃಪಗತ ಮಾಡಿದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು.
- ಇನ್ನುಳಿದ ಸೂಚನೆಗಳು ಮತ್ತು ಷರತ್ತುಗಳು ಈ ಜ್ಞಾಪನದಲ್ಲಿರುವ ಉಲ್ಲೇಖಗಳಲ್ಲಿರುವ ಪತ್ರಗಳನ್ವಯ ಮತ್ತು ಪ್ರಚಲಿತವಾಗಿ ಅನ್ವಯವಾಗುವ ನಿಯಮಗಳನ್ವಯ ಮುಂದುವರಿಯುತ್ತದೆ.