alex Certify ಪ್ರಿಯಾಂಕಾ ಗಾಂಧಿ ಬಂಧನದ ವೇಳೆ ಹೈಡ್ರಾಮಾ…! ಪೊಲೀಸರ ವಿರುದ್ದ ಹರಿಹಾಯ್ದ ಕಾಂಗ್ರೆಸ್‌ ಯುವನಾಯಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಿಯಾಂಕಾ ಗಾಂಧಿ ಬಂಧನದ ವೇಳೆ ಹೈಡ್ರಾಮಾ…! ಪೊಲೀಸರ ವಿರುದ್ದ ಹರಿಹಾಯ್ದ ಕಾಂಗ್ರೆಸ್‌ ಯುವನಾಯಕಿ

ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾರನ್ನು ಇಂದು ಬೆಳಗ್ಗೆ ಉತ್ತರ ಪ್ರದೇಶ ಸೀತಾಪುರ ಜಿಲ್ಲೆಯ ಹರಗಾಂವ್​ನಲ್ಲಿ ಬಂಧಿಸಲಾಗಿದೆ. ಲಖಿಂಪುರ – ಖೇರಿಗೆ ತೆರಳುತ್ತಿದ್ದ ವೇಳೆ ಅವರನ್ನು ಬಂಧಿಸಲಾಗಿದೆ. ಭಾನುವಾರ ಲಖಿಂಪುರ – ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಉತ್ತರ ಪ್ರದೇಶ ಡಿಸಿಎಂ ಕೇಶವ ಪ್ರಸಾದ್​ ಮೌರ್ಯ ಭೇಟಿಯನ್ನು ಖಂಡಿಸಿ ರೈತರು ನಡೆಸಿದ್ದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ್ದು ಇದರಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದರು. ಹೀಗಾಗಿ ಮೃತರ ಕುಟುಂಬಸ್ಥರನ್ನು ಭೇಟಿ ಮಾಡಲು ಪ್ರಿಯಾಂಕಾ ಗಾಂಧಿ ತೆರಳುತ್ತಿದ್ದರು. ಲಖನೌನಲ್ಲಿ ತಂಗಿದ್ದ ವೇಳೆ ಪ್ರಿಯಾಂಕಾ ಗಾಂಧಿ ಬೆಂಗಾವಲನ್ನು ಉತ್ತರ ಪ್ರದೇಶ ಪೊಲೀಸರು ತಡೆದಿದ್ದಾರೆ. ಈ ವೇಳೆ ಪ್ರಿಯಾಂಕಾರನ್ನು ಕಾಂಗ್ರೆಸ್​ ನಾಯಕ ದೀಪೇಂದ್ರ ಸಿಂಗ್​ ಹೂಡಾ ಲಖಿಂಪುರ – ಖೇರಿಗೆ ಕಡೆಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ರು.

ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಹರಗಾಂವ್​ನಲ್ಲಿ ಪೊಲೀಸರು ಪ್ರಿಯಾಂಕಾ ಗಾಂಧಿ ವಾದ್ರಾರನ್ನು ತಡೆದಿದ್ದಾರೆ. ಈ ವೇಳೆ ಯುಪಿ ಪೊಲೀಸರು ಹಾಗೂ ಪ್ರಿಯಾಂಕಾ ನಡುವೆ ಸಣ್ಣ ಮಾತಿನ ಚಕಮಕಿ ಕೂಡ ನಡೆದಿದೆ. ಬಂಧನಕ್ಕೂ ಮುನ್ನ ಅರೆಸ್ಟ್​ ವಾರೆಂಟ್​ ತೋರಿಸುವಂತೆ ಪ್ರಿಯಾಂಕಾ ಪೊಲೀಸರ ಮುಂದೆ ಬೇಡಿಕೆ ಇಟ್ಟಿದ್ದಾರೆ.

ನೀವು ಯಾರನ್ನು ಕೊಂದಿದ್ದೀರೋ ಆ ಜನಕ್ಕಿಂತ ನಾನು ಮುಖ್ಯಳಲ್ಲ. ನೀವು ಸರ್ಕಾರವನ್ನು ಸಮರ್ಥಿಸಿಕೊಳ್ತಿದ್ದೀರಿ. ರೈತರ ಮೇಲೆ ವಾಹನವನ್ನು ಹರಿಸಿ ಕೊಲ್ಲಲಾಗಿದೆ ಎಂದು ಪೊಲೀಸರಿಗೆ ಪ್ರಿಯಾಂಕಾ ಹೇಳಿದ್ದಾರೆ. ರಾಷ್ಟ್ರೀಯ ಯುವ ಕಾಂಗ್ರೆಸ್​ ಅಧ್ಯಕ್ಷ ಶ್ರೀನಿವಾಸ್​ ಬಿ.ವಿ. ಈ ವಿಡಿಯೋವನ್ನು ಟ್ವೀಟ್​ ಮೂಲಕ ಹಂಚಿಕೊಂಡಿದ್ದಾರೆ.

ಮನೆಯಿಂದ ಹೊರಬಂದು ನಾನು ಯಾವುದೇ ಅಪರಾಧ ಮಾಡಿಲ್ಲ. ನಾನು ಸಂತ್ರಸ್ತರ ಕುಟುಂಬವನ್ನು ಭೇಟಿ ಮಾಡಿ ಅವರ ನೋವಿಗೆ ಸಾಂತ್ವನ ನೀಡಲು ಹೊರಟಿದ್ದೇನೆ. ನಾನು ಏನು ತಪ್ಪು ಮಾಡ್ತಿದ್ದೇನೆ..? ನಾನು ತಪ್ಪು ಮಾಡಿದ್ದರೆ ನಿಮ್ಮ ಬಳಿ ಬಂಧನ ವಾರಂಟ್​ ಇರಬೇಕು. ಯಾವ ಕಾರಣಕ್ಕಾಗಿ ನನ್ನ ಕಾರನ್ನು ತಡೆದಿದ್ದೀರಿ ಎಂದು ಪೊಲೀಸರಿಗೆ ಪ್ರಶ್ನೆ ಮಾಡಿದ್ದಾರೆ. ಉತ್ತರ ಪ್ರದೇಶ ಪೊಲೀಸರು ಪ್ರಿಯಾಂಕಾರನ್ನು ಬಂಧಿಸಿದ್ದು ಕಾಂಗ್ರೆಸ್​ ನಾಯಕರು ಈ ವಿಡಿಯೋ ಶೇರ್​ ಮಾಡುವ ಮೂಲಕ ಪ್ರಿಯಾಂಕಾರಿಗೆ ಬೆಂಬಲ ಸೂಚಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...