ಮಳೆಗಾಲ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಮಳೆಗಾಲ ಈಗಾಗಲೆ ಶುರುವಾಗಿದೆ.
ಮಳೆಗಾಲದಲ್ಲಿ ಆರೋಗ್ಯ ಸಮಸ್ಯೆಗಳು ಕಾಡುವುದು ಸಾಮಾನ್ಯ. ತೇವಾಂಶದಿಂದಾಗಿ ಪಾದಗಳು ಹಾಗೂ ಬೆರಳುಗಳ ಮಧ್ಯೆ ಕೊಳೆಯುವ ಸಮಸ್ಯೆ ಕೆಲವರನ್ನು ಕಾಡುತ್ತದೆ. ಮಳೆಗಾಲದಲ್ಲಿ ಕೆಲವೊಂದು ಸರಳ ಟಿಪ್ಸ್ ಅನುಸರಿಸಿ ಕಾಲಿನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.
ಮಳೆಗಾಲದಲ್ಲಿ ಕಾಲಿಗೆ ಹೆಚ್ಚಿನ ಆರೈಕೆಯ ಅವಶ್ಯಕತೆ ಇದೆ. ದಿನದಲ್ಲಿ 2-3 ಬಾರಿ ಕಾಲನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ಪ್ರತಿಬಾರಿ ಕಾಲು ತೊಳೆದ ನಂತ್ರ ಟವೆಲ್ ನಿಂದ ಕಾಲಿನಲ್ಲಿರುವ ನೀರನ್ನು ಕ್ಲೀನ್ ಮಾಡಿ. ಕಾಲು ತೊಳೆಯುವ ನೀರಿಗೆ ಚಿಟಕಿ ಉಪ್ಪು ಹಾಕುವುದು ಒಳ್ಳೆಯದು.
ಸುಂದರ ಹಾಗೂ ಮೃದು ಕಾಲುಗಳನ್ನು ಪಡೆಯಲು ರಾತ್ರಿ ಮಲಗುವ ಮೊದಲು ಉಗುರು ಬೆಚ್ಚಗಿನ ತೆಂಗಿನ ಎಣ್ಣೆಯನ್ನು ಪಾದಗಳಿಗೆ ಹಚ್ಚಿ ಮಸಾಜ್ ಮಾಡಿ.
ಈ ಋತುವಿನಲ್ಲಿ ಅನೇಕ ಮಹಿಳೆಯರ ಪಾದಗಳು ಬಿರುಕುಬಿಡುತ್ತವೆ. ಅಂತವರು ಪ್ರತಿದಿನ ನಿಂಬೆ ಹಣ್ಣಿನ ಸಿಪ್ಪೆಯನ್ನು ಪಾದದ ಬಿರುಕಿಗೆ ಹಚ್ಚಿಕೊಳ್ಳಿ. ನಿಂಬೆ ರಸವನ್ನು ಉಗುರು ಬೆಚ್ಚಗಿನ ನೀರಿಗೆ ಹಾಕಿ ಅದ್ರಲ್ಲಿ ಪಾದಗಳನ್ನಿಟ್ಟು 20 ನಿಮಿಷ ಹಾಗೆ ಬಿಡಿ. ನಂತ್ರ ಕಾಲನ್ನು ಸ್ವಚ್ಛಗೊಳಿಸಿಕೊಳ್ಳಿ.