ಸಿಬಿಎಸ್‌ಇ ಮುಂಬರುವ ಶೈಕ್ಷಣಿಕ ಸಾಲು 2022-23ಕ್ಕೆ 9, 10, 11 ಮತ್ತು 12ನೇ ತರಗತಿಗಳ ಪಠ್ಯಕ್ರಮವನ್ನು ಪ್ರಕಟಿಸಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ವಿವಿಧ ತರಗತಿಗಳ ಪಠ್ಯಕ್ರಮ ಡೌನ್‌ಲೋಡ್ ಮಾಡಲು cbseacademic.nic.in ನಲ್ಲಿ ಅವಕಾಶ ಮಾಡಿಕೊಡಲಾಗಿದೆ.
10 ಮತ್ತು 12 ನೇ ತರಗತಿಯ ಪಠ್ಯಕ್ರಮವನ್ನು ಎರಡು ಪದಗಳಾಗಿ ವಿಂಗಡಿಸಲಾಗಿಲ್ಲ, ಅಂದರೆ ಕೋವಿಡ್ ಕಾರಣಕ್ಕೆ ಎರಡು ಭಾಗವಾಗಿ ವಿಭಜಿಸುವ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ.
ಸಿಬಿಎಸ್‌ಇ 1ನೇ ಅವಧಿ ಪರೀಕ್ಷೆ 2022 ಅನ್ನು ನವೆಂಬರ್-ಡಿಸೆಂಬರ್, 2021 ರಲ್ಲಿ ನಡೆಸಲಾಗಿತ್ತು ಮತ್ತು ಅವಧಿ 2ರ ಪರೀಕ್ಷೆಗಳನ್ನು 2022 ರ ಏಪ್ರಿಲ್ ಮೇನಲ್ಲಿ ನಡೆಸಲು ನಿಗದಿಪಡಿಸಲಾಗಿದೆ.
ಮಂಡಳಿಯು ಮುಂದಿನ ಶೈಕ್ಷಣಿಕ ವರ್ಷದಿಂದ ವರ್ಷಕ್ಕೊಮ್ಮೆ ಅಂತಿಮ ಪರೀಕ್ಷೆಯ ವ್ಯವಸ್ಥೆಗೆ ಹಿಂತಿರುಗಲಿದೆ ಎಂದು ಅಧಿಕಾರಿಯೊಬ್ಬರು ಖಚಿತಪಡಿಸಿದ್ದರು.
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಎರಡು ಅವಧಿಯ ಪರೀಕ್ಷೆಗಳಿಗೆ ಒಲವು ತೋರಿದೆ. ಆದರೂ ಸಹ ಇದೀಗ ಹಿಂದಿನ ಪದ್ಧತಿಗೆ ಬದಲಾಯಿಸಲು ನಿರ್ಧರಿಸಲಾಗಿದೆ.