ಕಾಂಗ್ರೆಸ್ ನಾಯಕ ಶಶಿ ತರೂರ್ ಮತ್ತು ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಡಿನ್ನರ್ ಪಾರ್ಟಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮಹುವಾ ಮೊಯಿತ್ರಾ ಸಿಗರ್ ಸೇದುತ್ತಿರುವಂತೆ , ಶಾಂಪೇನ್ ಕುಡಿಯುತ್ತಿರುವ ಫೋಟೋಗಳನ್ನು ಇಂಟರ್ನೆಟ್ ನಲ್ಲಿ ಫೋಟೋಗಳನ್ನು ಹರಿಬಿಡಲಾಗಿದೆ.
ಇಬ್ಬರೂ ಒಟ್ಟಿಗೆ ಪಾರ್ಟಿಯಲ್ಲಿರುವ ಫೋಟೋಗಳು ವೈರಲ್ ಆಗ್ತಿದ್ದು ಈ ರಾಜಕೀಯ ಲೀಡರ್ಸ್ ನಡುವಿನ ಸಂಬಂಧದ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಆದರೆ ಈ ವೈರಲ್ ಫೋಟೋಗಳ ಬಗ್ಗೆ ಪ್ರತಿಕ್ರಿಯಿಸಿರುವ ಮಹುವಾ ಮೊಯಿತ್ರಾ, ಬಿಜೆಪಿ ಐಟಿ ಸೆಲ್ ಇಂತಹ ಕೃತ್ಯ ನಡೆಸಿದೆ ಎಂದು ಆರೋಪಿಸಿದ್ದಾರೆ.
ಕ್ರಾಪ್ ಮಾಡಿದ ಚಿತ್ರಗಳನ್ನ ಇಂಟರ್ನೆಟ್ ನಲ್ಲಿ ಹಾಕ್ತಿದ್ದಾರೆ. ನಮ್ಮೊಂದಿಗೆ ಇತರರೂ ಇರುವ ಸಂಪೂರ್ಣ ಫೋಟೋ ಹಾಕಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನನಗೆ ಅಲರ್ಜಿ ಇದೆ, ನಾನು ಸಿಗಾರ್ ಸೇದುವುದಿಲ್ಲ, ಪಶ್ಚಿಮ ಬಂಗಾಳದ ಮಹಿಳೆ ಜೀವನ ನಡೆಸುತ್ತಾಳೆ, ಸುಳ್ಳು ಹರಡುವುದಿಲ್ಲ ಎಂದು ಮಹುವಾ ಮೊಯಿತ್ರಾ ಫೋಟೋ ಹರಿಬಿಟ್ಟವರಿಗೆ ತಿರುಗೇಟು ನೀಡಿದ್ದಾರೆ.
“ನನ್ನ ಕೆಲವು ವೈಯಕ್ತಿಕ ಫೋಟೋಗಳನ್ನು @BJP4India ದ ಟ್ರೋಲ್ ಸೇನೆಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡುವುದನ್ನು ನೋಡಿ ತುಂಬಾ ಖುಷಿಯಾಗಿದೆ. ನನಗೆ ಬಿಳಿ ಕುಪ್ಪಸಕ್ಕಿಂತ ಹಸಿರು ಬಟ್ಟೆಯೇ ಹೆಚ್ಚು ಇಷ್ಟ. ಫೋಟೋ ಏಕೆ ಕ್ರಾಪ್ ಮಾಡಬೇಕು? ರಾತ್ರಿಯ ಊಟದಲ್ಲಿ ಸೇರಿದ್ದ ಇತರರನ್ನೂ ತೋರಿಸಿ. ಬಂಗಾಳದ ಮಹಿಳೆಯರು ಬದುಕುತ್ತಾರೆ, ಸುಳ್ಳಲ್ಲ.” ಎಂದು ಮಹುವಾ ಮೊಯಿತ್ರಾ ಟ್ವೀಟ್ ಮಾಡಿದ್ದಾರೆ.