
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಸಾಮಾಜಿಕ ಮಾಧ್ಯಮದಲ್ಲಿ, ವಿಶೇಷವಾಗಿ ಟ್ವಿಟರ್‌ನಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ತಮ್ಮ ಜೀವನದ ಕೆಲವು ಕ್ಷಣಗಳನ್ನು ಹಂಚಿಕೊಳ್ಳುತ್ತಾರೆ. ಜನವರಿ 20 ರಂದು, ಇವರು ಪಶ್ಚಿಮ ಬಂಗಾಳದ ತಮ್ಮ ಲೋಕಸಭಾ ಕ್ಷೇತ್ರವಾದ ಕೃಷ್ಣನಗರದ ಜನರೊಂದಿಗೆ ಕೇರಂ ಆಡುವ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಮಹುವಾ ಅವರು ಎಕ್ಸ್ಪರ್ಟ್ ರೀತಿಯಲ್ಲಿ ಕೇರಂ ಆಡುತ್ತಿರುವುದನ್ನು ಕಾಣಬಹುದು. ಅವರು ಸ್ಟ್ರೈಕರ್‌ಗೆ ಗುರಿಯಿಟ್ಟು ಸೆಕೆಂಡುಗಳಲ್ಲಿ ನಾಣ್ಯವನ್ನು ಕೆಳಕ್ಕೆ ಬೀಳಿಸಿದ್ದಾರೆ. ಇದನ್ನು ನೋಡಿ ಸುತ್ತ ಇದ್ದವರೆಲ್ಲ ಚಪ್ಪಾಳೆ ತಟ್ಟುತ್ತಿರುವುದು ಹಾಗೂ ಹೀಗೆ ಕೆಲ ಕೇರಂ ಕಾಯಿನ್ ಉರುಳಿಸುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
“ಬಿಸಿಲಿನಲ್ಲಿ ಸ್ವಲ್ಪ ಹಳ್ಳಿ ಕೇರಂ” ಎಂದು ಮೊಯಿತ್ರಾ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವಿಡಿಯೋ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಗಳಿಸಿದೆ. ಟ್ವಿಟರ್ ಬಳಕೆದಾರರು ತ್ವರಿತವಾಗಿ ಪ್ರತಿಕ್ರಿಯಿಸಿದರು ಮತ್ತು ಕಾಮೆಂಟ್‌ಗಳ ವಿಭಾಗದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.