
ರಾಜ್ಯಪಾಲರಾಗಿ ತಮ್ಮ ಕಾರ್ಯಾಲಯದಲ್ಲಿ ತಮ್ಮದೇ ಕುಟುಂಬದ ಆರು ಮಂದಿಯನ್ನು ವಿಶೇಷ ಅಧಿಕಾರಿಗಳನ್ನಾಗಿ ನೇಮಕ ಮಾಡಿಕೊಂಡಿರುವ ಜಗದೀಪ್‌ರನ್ನು ಕುಟುಕಿದ ಮೊಯಿತ್ರಾ, “ಅಂಕಲ್‌ಜೀ – ಇದನ್ನು ಓದಲು ಪ್ರಯತ್ನಿಸಿ. – ನಿಮ್ಮ ಹುದ್ದೆಯ ವಿವರವೇನೆಂದು ಸರಿಯಾಗಿ ಅರ್ಥವಾಗಬಹುದು…..” ಎಂದು ಟ್ವೀಟ್ ಮಾಡಿದ್ದು, ಚುನಾಯಿತ ಸರ್ಕಾರದ ಮೇಲೆ ವಿಪರೀತ ವಾಗ್ದಾಳಿ ನಡೆಸುವುದನ್ನು ಬಿಡಲು ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಾಧೀಶರೊಬ್ಬರು ರಾಜ್ಯಪಾಲರಿಗೆ ಸೂಚಿಸಿರುವುದನ್ನು ನೆನಪಿಸಿದ್ದಾರೆ.
“ರಾಜಭವನಕ್ಕೆ ನೇಮಕಗೊಂಡಿರುವ ಈ ವ್ಯಕ್ತಿಗಳ ಪೂರ್ವಾಪರಗಳೇನು ಹಾಗೂ ಅವರು ಅಲ್ಲಿಗೆ ಹೇಗೆ ಬಂದಿದ್ದಾರೆ ಎಂದು ಅಂಕಲ್‌ಜೀ ಅವರು ಸ್ಪಷ್ಟಪಡಿಸಲಿ. ಬಿಜೆಪಿ ಐಟಿ ಸೆಲ್‌ಗೆ ಈ ವಿವರಗಳನ್ನು ಅಂಕಲ್‌ಜೀರಿಂದ ಪಡೆಯಲು ಸಾಧ್ಯವಿಲ್ಲ. ನಿಮ್ಮ ಪರವಾಗಿ ಭಾರತದ ಉಪರಾಷ್ಟ್ರಪತಿಗಳೂ ಸಹ ಬರಲಾರರು ಎಂದು ನನಗೆ ಅನಿಸುತ್ತದೆ” ಎಂದಿದ್ದಾರೆ ಮೊಯಿತ್ರಾ.
ವಿಶೇಷ ಅಧಿಕಾರಿಗಳ ನೇಮಕದ ವೇಳೆ ತಮ್ಮ ಸಂಬಂಧಿಕರನ್ನು ಪರಿಗಣಿಸಲಾಗಿದೆ ಎಂಬ ಆಪಾದನೆ ತಳ್ಳಿಹಾಕಿದ ಜಗದೀಪ್, ತಮ್ಮ ಟ್ವೀಟ್ ಒಂದರ ಮೂಲಕ, “ವಿಶೇಷ ಅಧಿಕಾರಿಗಳು ಮೂರು ರಾಜ್ಯಗಳಿಗೆ ಸೇರಿದವರಾಗಿದ್ದು, ನಾಲ್ಕು ಭಿನ್ನ ಜಾತಿಗಳಿಗೆ ಸೇರಿದ್ದಾರೆ. ಅವರಾರೂ ನನ್ನ ಹತ್ತಿರದ ಬಂಧುಗಳಲ್ಲ. ಅವರು ನನ್ನ ಜಾತಿಯಾಗಲೀ ಅಥವಾ ರಾಜ್ಯದವರಲ್ಲ” ಎಂದಿದ್ದಾರೆ.
https://twitter.com/jdhankhar1/status/1401752621157818369?ref_src=twsrc%5Etfw%7Ctwcamp%5Etweetembed%7Ctwterm%5E1401752621157818369%7Ctwgr%5E%7Ctwcon%5Es1_&ref_url=https%3A%2F%2Fwww.ndtv.com%2Findia-news%2Fmahua-moitra-jagdeep-dhankhar-uncle-ji-trinamools-mahua-moitra-bengal-governor-tee-off-new-war-2457990