ಮೈಸೂರು: ವಿರೋಧದ ನಡುವೆಯೂ ಅಕ್ಟೋಬರ್ 13ರಂದು ಮಹಿಷ ದಸರಾ ಆಚರಣೆಗೆ ಸಿದ್ಧತೆ ನಡೆದಿದೆ. ಈ ನಡುವೆ ಮಹಿಷ ದಸರಾ ಮುಗಿಯುವುದರೊಳಗೆ ಸಂಸದ ಪ್ರತಾಪ್ ಸಿಂಹ ಅವರನ್ನು ಬಂಧಿಸುವಂತೆ ಮಾಜಿ ಮೇಯರ್ ಪುರುಷೋತ್ತಮ ಆಗ್ರಹಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮೇಯರ್ ಪುರುಷೋತ್ತಮ, ಪ್ರತಾಪ್ ಸಿಂಹ ಅವರಂತಹ ಸಂಸದರನ್ನು ನಾನು ನೋಡಿಲ್ಲ. ತಮ್ಮ ರಾಜಕೀಯಕ್ಕಾಗಿ ಚಾಮುಂಡಿ ಚಲೋ ಕರೆ ನೀಡಿದ್ದಾರೆ. ನಾವು ಚಾಮುಂಡಿ ವಿರೋಧಿಗಳಲ್ಲ ಎಂದು ಹೇಳಿದರು.
ವೈಯಕ್ತಿಕ ದ್ವೇಷಕ್ಕೆ ಇಳಿಯುತ್ತಿರುವುದು ಸರಿಯಲ್ಲ. ಸಂಘರ್ಷಕ್ಕೂ ಸಿದ್ಧ ಎಂಬ ಹೇಳಿಕೆಯನ್ನು ಪ್ರತಾಪ್ ಸಿಂಹ ಕೊಟ್ಟಿದ್ದಾರೆ. ಅವರನ್ನು ಯಾರು ಸಂಘರ್ಷಕ್ಕೆ ಕರೆದಿದ್ದಾರೆ ಅವರೊಂದಿಗೆ ಸಂಘರ್ಷ ಮಾಡಲಿ. ಪ್ರತಾಪ್ ಸಿಂಹ ಸಂಘರ್ಷದ ಪದ ಬಳಕೆ ಮಾಡುತ್ತಿದ್ದರೂ ಪೊಲೀಸರು, ಜಿಲ್ಲಾಡಳಿತ ನೋಡುತ್ತಾ ಕುಳಿತಿದೆ. ಅವರನ್ನು ಆಗಲೇ ಬಂಧಿಸಬೇಕಿತ್ತು ಎಂದು ಕಿಡಿಕಾರಿದ್ದಾರೆ.
ನಾವು ಯಾವ ಸಂಘರ್ಷಕ್ಕೂ ಇಳಿಯಲ್ಲ. ಮಹಿಷ ದಸರಾ ಕಾರ್ಯಕ್ರಮವನ್ನು ಮಾಡುತ್ತೇವೆ. ಮಹಿಷ ದಸರಾ ಮುಗಿಯುವುದರೊಳಗೆ ಪ್ರತಾಪ್ ಸಿಂಹರನ್ನು ಬಂಧಿಸಲಿ ಎಂಬುದು ನಮ್ಮ ಸಮಿತಿ ಒತ್ತಾಯ ಎಂದು ಹೇಳಿದರು.