ಮಹೀಂದ್ರಾ & ಮಹೀಂದ್ರಾ ಎಕ್ಸ್ಯುವಿ 700ನ ಹೊಸ ವೇರಿಯೆಂಟ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಯೋಜಿಸುತ್ತಿದೆ.
ಪ್ರಸ್ತುತ, XUV700 MX ಮತ್ತು AX ಎಂಬ ಎರಡು ವೇರಿಯೆಂಟ್ಗಳು ಲಭ್ಯವಿದೆ. ಇವುಗಳಲ್ಲಿ MX, AX3, AX5, AX7 ಮತ್ತು AX7L ಸೇರಿವೆ. ಇದಕ್ಕೆ ಮಹೀಂದ್ರಾ ಈಗ ಹೊಸ MX (E) ವೇರಿಯೆಂಟ್ ಸೇರಿಸಲು ಸಜ್ಜಾಗುತ್ತಿದೆ. ಹೊಸ ವೇರಿಯೆಂಟ್ ಕುರಿತು ಹೆಚ್ಚಿನ ವಿವರಗಳಿಲ್ಲದಿದ್ದರೂ, ಮಹೀಂದ್ರಾ ಕೆಲವು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಬಹುದು ಎನ್ನಲಾಗಿದೆ.
ವೈಶಿಷ್ಟ್ಯಗಳ ವಿಷಯಕ್ಕೆ ಬರುವುದಾದರೆ ಹೊಸ ವೇರಿಯೆಂಟ್ನಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಹೈ ಬೀಮ್ ಅಸಿಸ್ಟ್, ಟ್ರಾಫಿಕ್ ಸೈನ್ ರೆಕಗ್ನಿಷನ್, ಸ್ಮಾರ್ಟ್ ಪೈಲಟ್ ಅಸಿಸ್ಟ್, ಲೇನ್ ಕೀಪ್ ಅಸಿಸ್ನಂಥ ಹೊಸ ವೈಶಿಷ್ಟ್ಯತೆಗಳನ್ನು ಅಳವಡಿಸುವ ಸಾಧ್ಯತೆ ಇದೆ.
XUV700 ನ ಪೆಟ್ರೋಲ್ ವೇರಿಯೆಂಟ್ 2.0L ಎಂಜಿನ್ನದ್ದಾಗಿದ್ದು, ಇದು 6-ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಸಂಯೋಜಿತವಾಗಿದೆ.